Advertisement

ಜೀವನ್ಮರಣ ಹೋರಾಟದಲ್ಲಿ ಶಶಿಕಾಂತ ಬಂಗೇರ: ಸಹಾಯಕ್ಕೆ ಮನವಿ

06:10 AM Apr 01, 2018 | Team Udayavani |

ಬೆಳ್ಮಣ್‌: ಇಲ್ಲಿಗೆ  ಸಮೀಪದ ಕಾಂಜಾರಕಟ್ಟೆ ನಿವಾಸಿ, ಫಿಟ್ಟರ್‌ ಕೆಲಸ ಮಾಡಿ  ಜೀವನ ನಡೆಸುತ್ತಿರುವ 31ವರ್ಷದ ಯುವಕ ಶಶಿಕಾಂತ್‌ ಬಂಗೇರಾರವರ ಎರಡೂ ಮೂತ್ರಪಿಂಡಗಳು ಕಾರ್ಯನಿರ್ವಹಿಸಲು ವೈಫಲ್ಯವಾದ ಬಗ್ಗೆ  ವೈದ್ಯರು ದೃಢೀಕರಣ ನೀಡಿದ್ದು, ಕುಟುಂಬಿಕರು ಸಹಾಯಕ್ಕೆ ಮನವಿ ಮಾಡಿದ್ದಾರೆ.

Advertisement

ಯುವಕ 9 ತಿಂಗಳ ಹಿಂದೆ ವಿವಾಹಿತನಾಗಿದ್ದು ಈಗ ಪತ್ನಿ ಗರ್ಭಿಣಿ. ಸಾಂಸಾರಿಕ ಜೀವನ ನಿರ್ವಹಣೆ ಸಂ ದಿಗ್ಧವಾಗಿದ್ದು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ವಾರಕ್ಕೆ ಮೂರು ಬಾರಿಯಂತೆ, ದಿನಕ್ಕೆ 4ಗಂಟೆಯ ಅವ ಯಲ್ಲಿ  ಡಯಾಲಿಸೀಸ್‌  ಮಾಡಿಕೊಳ್ಳುತ್ತಿದ್ದು, ದೇಹವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಏರಿಕೆಯಾಗುತ್ತಿರುವ ಡಯಾಲಿಸಿಸ್‌ ಖರ್ಚು ಭರಿಸುವುದೂ ಕಷ್ಠವಾಗಿದೆ. ಸ್ನೇಹಿತರ ಸಹಾಯವೂ ಕಡಿಮೆಯಾಗಿದ್ದು  ಕುಟುಂಬದ ಬಡತನವು ಜೀವನ ನಿರ್ವಹಣೆಗೂ ಸಂಕಷ್ಟ ಎದುರಾಗಿದೆ.

ಈ ವ್ಯಾಧಿಯಿಂದ ಹೊರಬರಲು ಕೇವಲ  ಕಿಡ್ನಿ ಬದಲಾವಣೆಯಿಂದ ಮಾತ್ರ ಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. 

ಮಗನ ಮೇಲಿನ ವಾತ್ಸಲ್ಯದಿಂದ ತಾಯಿ ಮಗನಿಗಾಗಿ ಕಿಡ್ನಿದಾನ ಮಾಡಲು ಮುಂದಾಗಿದ್ದಾರೆ. ಈ ಪ್ರಕ್ರಿಯೆಗಾಗಿ ಕನಿಷ್ಟ 12ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.  ಈ ದಾರುಣ ಸ್ಥಿತಿಯಲ್ಲಿ ಶಶಿಕಾಂತ್‌ ಬಂಗೇರಾ ದಾನಿಗಳ, ಸೇವಾ ಸಂಸ್ಥೆಗಳ ಮೊರೆಹೋಗಿದ್ದಾರೆ. ಆರೋಗ್ಯವಂತನಾದ ಬಳಿಕ ದುಡಿದು ಪ್ರಾಣ ಉಳಿಸುವಲ್ಲಿ ಸಹಕರಿಸಿದ ಸಹೃದಯಿಗಳ ಋಣಚುಕ್ತ ಮಾಡುವುದಾಗಿಯೂ ವಿನಂತಿಸಿದ್ದಾರೆ. ಶಶಿಕಾಂತ ಅವರ ಪ್ರಾಣ ಉಳಿಸಲು ದಾನಿಗಳ ಸಹಾಯ ಅತೀ ಅಗತ್ಯ.

ನೆರವು ನೀಡಿ
ಆರ್ಥಿಕ ಸಹಾಯ ನೀಡುವ ದಾನಿಗಳು ಸಿಂಡಿಕೇಟ್‌ ಬ್ಯಾಂಕ್‌ – ಕಾಂಜಾರಕಟ್ಟೆ ಶಾಖೆ – ಕಾರ್ಕಳ ತಾಲೂಕು. (ಖಾತೆ ನಂಬ್ರ:-01382200056384.  ಐಎಫ್‌ಎಸ್‌ಸಿ ಕೋಡ್‌-ಎಸ್‌ವೈಎನ್‌ಬಿ0000218) ಗೆ ವರ್ಗಾಯಿಸಬಹುದು. ಸಂಪರ್ಕ ಸಂಖ್ಯೆ: 7619146744.

Advertisement
Advertisement

Udayavani is now on Telegram. Click here to join our channel and stay updated with the latest news.

Next