Advertisement

ಈಶಾನ್ಯ ಹಿಂಸಾಚಾರ, ರಾಹುಲ್ ಹೇಳಿಕೆ ಗದ್ದಲ; ಲೋಕಸಭೆ ಉಭಯ ಸದನ ಅನಿರ್ದಿಷ್ಟಾವಧಿ ಮುಂದೂಡಿಕೆ

09:59 AM Dec 14, 2019 | Nagendra Trasi |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ರೇಪ್ ಇನ್ ಇಂಡಿಯಾ ಹೇಳಿಕೆಯ ಕೋಲಾಹಲದಿಂದಾಗಿ ಲೋಕಸಭೆಯ ಉಭಯ ಸದನಗಳು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.

Advertisement

ಮೇಕ್ ಇನ್ ಇಂಡಿಯಾ ಇದೀಗ ರೇಪ್ ಇನ್ ಇಂಡಿಯಾದತ್ತ ಹೊರಳುತ್ತಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದರು. ಇದರಿಂದ ತೀವ್ರ ಕೋಲಾಹಲ ಮುಂದುವರಿದಾಗ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಲೋಕಸಭೆಯ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಲೋಕಸಭೆ ಕಲಾಪದಲ್ಲಿ ವಿಪಕ್ಷ ಸಂಸದರು ಕೂಡಾ ನಮಗೂ ನ್ಯಾಯ ಬೇಕು ಎಂದು ಘೋಷಣೆ ಕೂಗಿದರು. ಅಲ್ಲದೇ ಪ್ರತಿಕ್ರಿಯೆ ನೀಡಲು ರಾಹುಲ್ ಗಾಂಧಿಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯಸಭೆಯೂ ಮುಂದೂಡಿಕೆ:

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಕಾಂಗ್ರೆಸ್, ಟಿಎಂಸಿ, ಡಿಎಂಕೆ ಹಾಗೂ ಎಡಪಕ್ಷಗಳು ತೀವ್ರ ಗದ್ದಲ ಕೋಲಾಹಲ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಕೆಲಕಾಲ ಕಲಾಪ ಮುಂದೂಡಿದರು.

Advertisement

ನಂತರ ಕಲಾಪ ಆರಂಭವಾದಾಗ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಹಿಂಸಾಚಾರದ ಕುರಿತು ಧ್ವನಿ ಎತ್ತಿದ ಟಿಎಂಸಿ ಮುಖಂಡರಿಗೆ ಕಾಂಗ್ರೆಸ್ ಕೂಡಾ ಬೆಂಬಲ ನೀಡಿ ಘೋಷಣೆ ಕೂಗಲು ಆರಂಭಿಸಿತ್ತು. ಏತನ್ಮಧ್ಯೆ ಟಿಎಂಸಿ ಸಂಸದ ಡೋಲಾ ಸೇನ್ ಸದನದ ಬಾವಿಗಿಳಿದು ಪೇಪರ್ ತುಣುಕುಗಳನ್ನು ಹರಿದಿದ್ದರು.

ಪ್ರತಿಭಟನಾ ನಿರತ ಸದಸ್ಯರಿಗೆ ಶಾಂತಿಯಿಂದ ಕಲಾಪ ನಡೆಸಲು ಅನುಕೂಲ ಮಾಡಿಕೊಡುವಂತೆ ಸಭಾಧ್ಯಕ್ಷರು ಮನವಿ ಮಾಡಿಕೊಂಡರು. ಆದರೆ ಗದ್ದಲ ಮುಂದುವರಿದಾಗ ಕಲಾಪವನ್ನು ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next