Advertisement
ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುತ್ತಿದ್ದರೆ ಮುಖ್ಯಸ್ಥರಿಗೆ ಹೇಳಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎನ್ನಿ. ಆದರೆ, ಮುಖ್ಯ ಸ್ಥಾನದಲ್ಲಿರುವ ವ್ಯಕ್ತಿಯೇ ಕಂಟಕನಾದರೆ,ಮುಂದಿನ ಕತೆಯೇನು ಹೇಳಿ? ಆಕೆ ಒಂದೋ ಸಹನಾಮಣಿ ಆಗಬೇಕು, ಇಲ್ಲಾ ಕೆಲಸ ಬಿಟ್ಟು ಹೊರಡಬೇಕು. ಆದರೆ, ಮೊದಲೇ ಹೇಳಿದಂತೆ ಸುಲಭವಾಗಿ ಕೆಲಸ ಬಿಟ್ಟು ಹೊರನಡೆಯುವುದು ಅಂದುಕೊಂಡಷ್ಟೇನೂ ಸುಲಭವಲ್ಲ.
ಇದು ಎಲ್ಲ ಕಚೇರಿಯ ಕತೆಯಲ್ಲ. ಕೆಲವೇ ಆಫೀಸುಗಳ ಕತೆ. ಅಂತೂ ಇಂತೂ ಹೇಗೋ ಕೆಲಸ ಗಿಟ್ಟಿಸಿಕೊಂಡ ರೂ ಆಕೆಗೆ ಬಾಸ್ ಕಾಡುತ್ತಲೇ ಇರುತ್ತಾನೆ. ಆತನ ಮುಂದೆ ತಗ್ಗಿ ಬಗ್ಗಿಯೇ ನಡೆಯಬೇಕು. ಕೊಂಚ ಎದುರಾಡಿದರೆ ಮುಗಿಯಿತು, ಮರುದಿನದಿಂದಲೇ ಟಾರ್ಗೆಟ್ ಟಾರ್ಚರ್ ಶುರು. ತನ್ನ ಬತ್ತಳಿಕೆಯಲ್ಲಿನ ಎಲ್ಲ ಅಸ್ತ್ರವನ್ನೂ ಪ್ರಯೋಗಿಸಿ, ಆಕೆಗೆ ಕೆಲಸ ಬಿಟ್ಟು ಹೊರನಡೆಯುವ ಸನ್ನಿವೇಶ ಸೃಷ್ಟಿಸಿಬಿಡುತ್ತಾರೆ. ಈ ಸಮಸ್ಯೆಗೆ ಗುರಿಯಾಗಿಬಿಟ್ಟ ರೆ, ಕಚೇರಿಯಲ್ಲಿ ಆಕೆಯನ್ನು ಯಾರೂ ಮಾತಾಡಿಸುವುದಿಲ್ಲ.
Related Articles
ಇನ್ನು ಮಹಿಳೆಯರಿಗೆ ವಾಶ್‌ರೂಂ ಒಂಥರಾ ತವರು ಮನೆ ಇದ್ದಹಾಗೆ. ಕಷ್ಟ ಎದುರಾಗಲೆಲ್ಲ ಹೋಗಿ ಒಂದು ಬಕೆಟ… ಕಣ್ಣೀರು ಸುರಿಸಿ, ತನ್ನಷ್ಟಕ್ಕೆ ತಾನು ಸಮಾಧಾನಿಸಿಕೊಂಡು ಹಿಂದಿರುಗುವ ತಾಣ. “ನನ್ನಿಂದ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಇವರಿಗೆಲ್ಲ ಮನೆಯಲ್ಲಿ ಹೆಣ್ಮಕ್ಕಳು ಇದ್ದಾರೋ, ಇಲ್ಲವೋ ಗೊತ್ತಾಗುತ್ತಿಲ್ಲ. ಸುಖಾಸುಮ್ಮನೆ ಎಗರಾಡುತ್ತಾರೆ.
Advertisement
ಯಾವುದೇ ಕಾರಣಕ್ಕೂ ನಾನು ಇಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ’ ಎಂದು ಬಿಕ್ಕಳಿಸುವ ಆಕೆಯ ನೋವಿನ ದನಿವಾಶ್ ರೂಮಿನಗೋಡೆಗಳಷ್ಟೇ ಕೇಳಿಸಿಕೊಳ್ಳುತ್ತವೆ. ಮುಂಜಾನೆ ಮತ್ತದೇ ಆಫೀಸಿಗೆ ಬಂದಾಗ ನಿನ್ನೆ ಏನೂ ಆಗಿಯೇ ಇಲ್ಲವೆಂದು ಆಕೆ ಕೆಲಸದಲ್ಲಿ ಮುಳುಗಿದರೂ, ಮತ್ತದೇ ಕಾಮುಕ ಬಾಸ್ ಕಾಡುತ್ತಲೇ ಇರುತ್ತಾನೆ.
* ರಮ್ಯ ತುಮಕೂರು