Advertisement

ಬಾಷ್‍: 2ನೇ ತ್ರೈಮಾಸಿಕದಲ್ಲಿ ಶೇ. 17.7ರಷ್ಟು ಬೆಳವಣಿಗೆ

11:50 AM Nov 11, 2021 | |

ಬೆಂಗಳೂರು: ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಬಾಷ್ ಲಿಮಿಟೆಡ್ 2021-2022 ನೇ ಹಣಕಾಸು ಸಾಲಿನ 2 ನೇ ತ್ರೈಮಾಸಿಕದಲ್ಲಿ ತನ್ನ ಕಾರ್ಯಾಚರಣೆಗಳಲ್ಲಿ 2918 ಕೋಟಿ ರೂಪಾಯಿಗಳಷ್ಟು ಆದಾಯ  ಗಳಿಸಿದೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17.7 ರಷ್ಟು ಹೆಚ್ಚಳ ಸಾಧಿಸಿದೆ. 2021 ರ ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿರ್ಬಂಧಗಳನ್ನು ತೆರವು ಮಾಡಿದ್ದರಿಂದ ಗಣನೀಯ ಪ್ರಮಾಣದಲ್ಲಿ ಮಾರಾಟದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಳ ಸಾಧಿಸಲು ಸಾಧ್ಯವಾಗಿದೆ.

Advertisement

ತೆರಿಗೆ ಪೂರ್ವ ಲಾಭವು 397 ಕೋಟಿ ರೂಪಾಯಿಗಳಾಗಿದ್ದು, ಕಾರ್ಯಾಚರಣೆಗಳ ಒಟ್ಟು ಆದಾಯದ ಶೇ.13.6 ರಷ್ಟಾಗಿದೆ. ತೆರಿಗೆ ನಂತರದ ಲಾಭವು 372 ಕೋಟಿ ರೂಪಾಯಿಗಳಾಗಿದ್ದು, ಕಾರ್ಯಾಚರಣೆಗಳ ಒಟ್ಟು ಆದಾಯದ ಶೇ.12.7 ರಷ್ಟಾಗಿದೆ.

ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಭಾರತದಲ್ಲಿ ಬಾಷ್ ಗ್ರೂಪ್ ನ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಮಾತನಾಡಿ “ಪ್ರಸ್ತುತ ಭಾರತದಲ್ಲಿ ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿರುವುದರಿಂದ ಆಟೋಮೋಟಿವ್ ಮಾರುಕಟ್ಟೆ ಉತ್ಪಾದನೆ ಕುಸಿದಿದೆಯಾದರೂ ಚೇತರಿಕೆಯ ಮುನ್ಸೂಚನೆ ಕಾಣುತ್ತಿದೆ. ಆದಾಗ್ಯೂ, ಆಟೋಮೋಟಿವ್ ಉದ್ಯಮವು ಬೆಳವಣಿಗೆಯತ್ತ ಸಾಗುತ್ತಿರುವ ಬಗ್ಗೆ ಮಾರುಕಟ್ಟೆಯಲ್ಲಿನ ಅಸ್ಥಿರತೆಯು ಪ್ರಮುಖ ಆತಂಕವನ್ನು ಸೃಷ್ಟಿ ಮಾಡಿದೆ” ಎಂದರು.

2021-22 ನೇ ಸಾಲಿನ 2 ನೇ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ಶೇ.20 ರಷ್ಟು ಹೆಚ್ಚಳವಾಗಿದ್ದು, ಪವರ್ ಟ್ರೇನ್ ಸಲೂಶನ್ಸ್ ವಿಭಾಗದಲ್ಲಿ ಶೇ.16 ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ, 2021-22 ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಂತರದಲ್ಲಿ ಶೇ.27 ರಷ್ಟು ಹೆಚ್ಚಳವಾಗಿದೆ. ಮೊಬಿಲಿಟಿ ಸಲೂಶನ್ಸ್ ಹೊರಗಿನ ವಿಭಾಗದಲ್ಲಿ ಬಾಷ್ ಶೇ.36 ಹೆಚ್ಚಳ ಸಾಧಿಸಿದ್ದು, ಇದಕ್ಕೆ ಪ್ರಮುಖ ಕಾರಣ 2021 ರ ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಪವರ್ ಟೂಲ್ಸ್ ವರ್ಗದಲ್ಲಿನ ವಹಿವಾಟು ಹೆಚ್ಚಳವಾಗಿರುವುದಾಗಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕುಂಠಿತಗೊಂಡಿದ್ದ ಕಂಪನಿಯ ವಹಿವಾಟು ಪರಿಸ್ಥಿತಿ ಸುಧಾರಣೆಗೊಳ್ಳುತ್ತಿದ್ದು, ಮಾರಾಟದಲ್ಲಿ ಚೇತರಿಕೆಯನ್ನು ಕಾಣುತ್ತಿದೆ.

ಶತಮಾನೋತ್ಸವದ ಸನಿಹದಲ್ಲಿ ಬಾಷ್ ಇಂಡಿಯಾ: ಬಾಷ್ ಇಂಡಿಯಾ ತನ್ನ ಶತಮಾನೋತ್ಸವ ಆಚರಣೆಯ ದಿನಗಳು ಸನಿಹದಲ್ಲಿದ್ದು, 2022 ಕ್ಕೆ ಈ ಸಂಭ್ರಮವನ್ನು ಆಚರಿಸಿಕೊಳ್ಳಲಿದೆ. ಕಂಪನಿಯು ಈಗಾಗಲೇ ಉದ್ಯಮವನ್ನು ಸಂಪೂರ್ಣ ಡಿಜಿಟಲ್ ಪರಿಸರ ವ್ಯವಸ್ಥೆಗೆ ರೂಪಾಂತರ ಮಾಡುವ ಕಾರ್ಯದಲ್ಲಿ ತೊಡಗಿದೆ.

Advertisement

“ನಮ್ಮ ಶತಮಾನೋತ್ಸವದ ಆಚರಣೆಗಳು ನಮ್ಮ ಸಹವರ್ತಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಗೆ ಸಂದ ಫಲಿತಾಂಶವಾಗಿದೆ. ಮೊಬಿಲಿಟಿ ಮತ್ತು ಅದರಾಚೆಗಿನ ಅತ್ಯಾಧುನಿಕ ಉತ್ಪನ್ನಗಳು, ಪರಿಹಾರಗಳು ಮತ್ತು ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಬಾಷ್ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. 2022 ರಲ್ಲಿ ಬಾಷ್ ಇಂಡಿಯಾ ತನ್ನ ಪೋರ್ಟ್ ಫೋಲಿಯೋದಾದ್ಯಂತ ನಮ್ಮ ಪ್ರಗತಿಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಲು ಹಲವಾರು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ” ಎಂದು ಸೌಮಿತ್ರ ಭಟ್ಟಾಚಾರ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next