Advertisement

ಬೊರಿವಲಿ ಶ್ರೀ ಅಷ್ಟ ವಿನಾಯಕ ಅಯ್ಯಪ್ಪ ಭಕ್ತವೃಂದದಿಂದ ಅರಸಿನ ಕುಂಕುಮ

12:47 PM Jan 22, 2019 | |

ಮುಂಬಯಿ: ಬದಲಾವಣೆಯ ಬದುಕಿನಲ್ಲಿ ತಾರತಮ್ಯಕ್ಕೆ ಮಹತ್ವ ನೀಡದೆ ಸಂಸ್ಕೃತಿಯ ವಿನಿಮಯದ ಜೊತೆಗೆ ಬದಲಾವಣೆ ಯನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವಲ್ಲಿ ನಾವೆಲ್ಲ ಸಿದ್ಧರಾಗಿರಬೇಕು. ಮಕ್ಕಳು ಇಂದು ಬದಲಾವಣೆ ಬಯಸುತ್ತಿರುವ ಸಕಾಲದಲ್ಲಿ ನಮ್ಮ ಸಮಾಜದ ಸ್ಥಿತಿಗತಿಗಳನ್ನು ಅರ್ಥೈಯಿಸಿಕೊಂಡು ಮುನ್ನಡೆಯುವ ಕಾಲ ಒದಗಿ ಬಂದಿದೆ. ಆದ್ದರಿಂದ ಪ್ರತಿಯೋರ್ವ ಮಹಿಳೆಯರು ತಮ್ಮ ಬದುಕಿನ ಬದಲಾವಣೆಯತ್ತ ಹೆಚ್ಚು ಗಮನ ಹರಿಸಬೇಕು ಎಂದು ಲೇಖಕಿ, ಕವಿ ಅರುಷಾ ಎನ್‌. ಶೆಟ್ಟಿ ನುಡಿದರು.

Advertisement

ಜ. 14ರಂದು ಬೊರಿವಲಿಯ ಓಲ್ಡ್‌ ಎಂಎಚ್‌ಬಿ ಕಾಲನಿಯಲ್ಲಿನ ಶ್ರೀ ಅಷ್ಟ ವಿನಾಯಕ ಅಯ್ಯಪ್ಪ ಭಕ್ತವೃಂದ ಮಹಿಳೆಯರಿಗಾಗಿ ಆಯೋಜಿಸಿದ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಧನುರಾಶಿಯಿಂದ ಸೂರ್ಯನು ಮಕರ ರಾಶಿ ಸ್ಥಾನಪಲ್ಲಟಗೊಳ್ಳುವ ಈ ಸಮಯ ಎಲ್ಲ ಕಾರ್ಯಗಳಿಗೆ ಶುಭ ಸಮಯವಾಗಿದ್ದು, ಉತ್ತರಾಯಣದ ಪರ್ವಕಾಲದಲ್ಲಿ ದಾನ-ಧರ್ಮದ ಮೂಲಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಉತ್ತಮ.  ಮಹಿಳೆಯರು ಭೇದ-ಭಾವ ಇಲ್ಲದೆ, ಇಂತಹ ಕಾರ್ಯಕ್ರಮಗಳಲ್ಲಿ ಸಮಾನತೆಯಿಂದ  ತೊಡಗಿಸಿಕೊಳ್ಳ ಬೇಕು ಎಂದು ನುಡಿದರು.

ಇನ್ನೋರ್ವ ಅತಿಥಿ ಲೇಖಕಿ ಲತಾ ಸಂತೋಷ್‌ ಶೆಟ್ಟಿ ಅವರು ಮಾತನಾಡಿ, ಅರಸಿನ ಕುಂಕುಮ ನಮ್ಮ ಭಾರತೀಯ ಪರಂಪರೆಯ ಸರ್ವಧರ್ಮದ ಸಂಕೇತ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅರಸಿನ ಕುಂಕುಮಕ್ಕೆ ಮಹತ್ವವಿದೆ. ಹಿರಿಯರಿಂದ ಬಂದ ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಮೂಲಕ ನಾವು ನಮ್ಮೊಂದಿಗೆ ಬೆಳೆಸಬೇಕು. ಮರಾಠಿ ಮಣ್ಣಿನಲ್ಲಿ ಈ ಸಂಸ್ಕೃತಿಯನ್ನು ಅವರಿಗಿಂತ ಹೆಚ್ಚಾಗಿ ಅದ್ದೂರಿಯಾಗಿ ಆಚರಿಸುತ್ತಿರುವುದು ವಾಸ್ತವ. ಎಲ್ಲಿ ಭಜನೆ ಇದೆಯೋ ಅಲ್ಲಿ ವಿಭಜನೆಯಿಲ್ಲ. ಈ ಭಜನ ಕಾರ್ಯಕ್ರಮಗಳು ಹೊಸ ತಲೆಮಾರಿಗೆ ಒಂದು ಕೊಡುಗೆಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕಿ, ಚಾರ್‌ಕೋಪ್‌ ಕನ್ನಡಿಗರ ಬಳಗದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ ಅವರು ಮಾತನಾಡಿ, ಹಿಂದು ಸಂಸ್ಕೃತಿಯ ಪ್ರಕಾರ ಹೆಣ್ಮಕ್ಕಳು ಮಾತೃಭಾವದ ಸಂಕೇತ. ಧಾರ್ಮಿಕತೆಯತ್ತ ಹೆಚ್ಚು ಪ್ರಭಾವಿತರಾದಾಗ ಸಂಸ್ಕೃತಿ, ಸಂಸ್ಕಾರಕ್ಕೆ ಹೊಸ ರೂಪುರೇಷೆ ದೊರೆಯುತ್ತದೆ. ಬದಲಾವಣೆಯ ಕಾಲಘಟ್ಟದಲ್ಲಿ ಮಹಿಳೆಯರು ಸಂಸ್ಕಾರದಿಂದ ದೂರ ಉಳಿಯುತ್ತಿರು ವುದು ವಿಷಾದನೀಯ. ಪ್ರತೀ ಯೋರ್ವ ಮಹಿಳೆಯರು ಅರಸಿನ- ಕುಂಕುಮವನ್ನು ಹಾಕಿ ತಾನೋರ್ವೆ ಪ್ರಕೃತಿಯ ಸೌಮ್ಯತೆಯನ್ನು ಪ್ರದರ್ಶಿಸಲು ಮುಂದಾಗಬೇಕು ಎಂದು ಹೇಳಿದರು.

ಕವಿ, ಲೇಖಕ ಶಿಮಂತೂರು ಚಂದ್ರಹಾಸ ಸುವರ್ಣ ಅವರು ಮಾತನಾಡಿ, ಅರಸಿನ ಕುಂಕುಮ ಮುತ್ತೆ$çದೆಯರಿಗೆ ಮೀಸಲು ಎಂದು ಒಪ್ಪಲು ಸಾಧ್ಯವಿಲ್ಲ. ಇದೊಂದು ಮಹಿಳೆಯರು ಸಮಾನತೆಯನ್ನು ಪ್ರದರ್ಶಿಸುವ ಕಾರ್ಯಕ್ರಮವಾಗಬೇಕು. ಹೆಣ್ಣು ಹೆಣ್ಣಿಗೆ ಶತ್ರುವಾಗಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಅರಸಿನ ಕುಂಕುಮ ಕಾರ್ಯಕ್ರಮ ನಮ್ಮ ಸಂಸ್ಕೃತಿಯಲ್ಲ ಎಂದು ನನ್ನ ಅನಿಸಿಕೆಯಾಗಿದೆ ಎಂದರು.

Advertisement

ಭಕ್ತವೃಂದ ಮಹಿಳಾ ಸದಸ್ಯೆಯರುಗಳಾದ ಕುಸುಮಾ ಅಮೀನ್‌, ರತ್ನಾ ಪೂಜಾರಿ, ಸುಲೋಚನಾ ಕುಕ್ಯಾನ್‌, ಹರಿಣಾ ಕೆ. ಸುವರ್ಣ, ವೇದಾ ಶೆಟ್ಟಿ, ದಯಾವತಿ ಶೇರ್ವೆಗಾರ್‌ ಅತಿಥಿಗಳನ್ನು ಶಾಲು ಹೊದೆಸಿ ಗೌರವಿಸಿದರು. ವೃಂದದ ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಸುರೇಶ್‌ ಗುರುಸ್ವಾಮಿ ಅವರನ್ನು  ಗೌರವಿಸಲಾಯಿತು. ಪ್ರಾರಂಭದಲ್ಲಿ ಮಹಿಳೆಯರಿಂದ ಭಜನ ಕಾರ್ಯಕ್ರಮ ನಡೆಯಿತು.

ಪರಿಸರದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಂದಿರದಲ್ಲಿ ವಿಶೇಷ ದೀಪಾಲಂಕಾರ, ಪೂಜೆ, ಪ್ರಸಾದ ವಿತರಣೆ ನಡೆಯಿತು. ವೃಂದದ ಸದಸ್ಯ ಶಿಮಂತೂರು ಪ್ರವೀಣ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ಲೀಲಾವತಿ ಎನ್‌. ಆಚಾರ್ಯ, ಲಕ್ಷ್ಮೀ  ಜಿ. ದೇವಾಡಿಗ, ಸಮಾಜ ಸೇವಕಿ ವಿಜಯಲಕ್ಷ್ಮೀ ಶೆಟ್ಟಿ, ರತ್ನಾ ಪೂಜಾರಿ, ಮಾಧುರಿ ಪೆಡೆ°àಕರ್‌ ಉಪಸ್ಥಿತರಿದ್ದರು.

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next