Advertisement

ಗಡಿಭಾಗದಲ್ಲಿ ಶಿಕ್ಷಣ ಪ್ರಗತಿಗೆ ಹೆಚ್ಚಿನ ಆದ್ಯತೆ

03:31 PM Jun 23, 2017 | |

ಚಿಂಚೋಳಿ: ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡಿರುವ ಕುಂಚಾವರಂ ಗಡಿಭಾಗದಲ್ಲಿ ಶಿಕ್ಷಣ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಲ್ಲಿನ ಪ್ರತಿಯೊಬ್ಬ ಕೂಲಿಕಾರ್ಮಿಕರ ಹಾಗೂ ರೈತರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ಪಡೆದುಕೊಳ್ಳಲು ಸರಕಾರಿ ಕೈಗಾರಿಕೆ ತರಬೇತಿ ಕೇಂದ್ರ(ಐಟಿಐ) ಕಾಲೇಜು ಮಂಜೂರಿಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು. 

Advertisement

ತಾಲೂಕಿನ ಪೋಚಾವರಂ ಗ್ರಾಮದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೈಗಾರಿಕೆ ತರಬೇತಿ ಕೇಂದ್ರ(ಐಟಿಐ)ಕಾಲೇಜು ಕಟ್ಟಡ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಕುಂಚಾವರಂ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ವಾಸಿಸುವ ತಾಂಡಾ-ಗ್ರಾಮಗಳ ಬಡವರ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕು.

ಶಿಕ್ಷಣದಿಂದಲೇ ಎಲ್ಲವೂ ಪ್ರಗತಿಯಾಗಲಿದೆ. ಈ ಕಾರಣಕ್ಕಾಗಿಯೇ 2013-14ನೇ ಸಾಲಿನಲ್ಲಿ ಐಟಿಐ ಕಾಲೇಜು ಮಂಜೂರಿಗೊಳಿಸಲಾಗಿದೆ ಎಂದು ಹೇಳಿದರು. ಗಡಿ ಪ್ರದೇಶದ ಜನರಿಗೆ ರಸ್ತೆ, ಕುಡಿಯುವ ನೀರು, ಸಾರಿಗೆ ಸಂಪರ್ಕ, ಶಾಲಾ ಕಟ್ಟಡ, ವಿದ್ಯುತ್‌ ಉಪಕೇಂದ್ರ, ಅಲ್ಲದೇ ಅಟಲ್‌ ಜನಸ್ನೇಹಿ ಕೇಂದ್ರ ಪ್ರಾರಂಭಿಸಿ ಅನುಕೂಲ ಮಾಡಿಕೊಳ್ಳಲಾಗಿದೆ.

ಗಡಿ ಪ್ರದೇಶದ ಜನರಿಗೆ ನೀಡಿದ ಭರವಸೆ ಈಡೇರಿಸಲಾಗುತ್ತಿದೆ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅ ಧಿಕಾರಕ್ಕೆ ಬಂದ ನಂತರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ 80ರಷ್ಟು ಈಡೇರಿಸಲಾಗಿದೆ. ಅಧಿಕಾರದಲ್ಲಿರುವುದು ಮುಖ್ಯವಲ್ಲ. ಅಧಿಕಾರದಲ್ಲಿದ್ದಾಗ ಮಾಡುವ ಅಭಿವೃದ್ಧಿ ಕೆಲಸಗಳು ಮುಖ್ಯವಾಗಿವೆ. ಕೈಗಾರಿಕೆ ತರಬೇತಿ ಕೇಂದ್ರ ಕಾಲೇಜು ಕಟ್ಟಡವನ್ನು ಜನವರಿ 2018ರೊಳಗೆ ಪೂರ್ಣಗೊಳಿಸಬೇಕು.

ಕುಂಚಾವರಂ ಗಡಿಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಕಳೆದ 4 ವರ್ಷಗಳಿಂದ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂದು ಹೇಳಿದರು. ಕುಂಚಾವರಂ ಗ್ರಾಪಂ ಅಧ್ಯಕ್ಷ ಗೋಪಾಲ, ತಾಪಂ ಸದಸ್ಯ ಚಿರಂಜೀವಿ ಶಿವರಾಮಪುರ, ನರಸಿಂಹಲೂ ಸವಾರಿ, ನರಸಿಂಹಲು ಕುಂಬಾರ ಮಾತನಾಡಿದರು. 

Advertisement

ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ತಾಪಂ ಇಒ ಅನೀಲಕುಮಾರ ರಾಠೊಡ, ಜಿಪಂ ಸದಸ್ಯೆ ಹೀರುಬಾಯಿ ಜಾಧವ, ಅಕಬರ್‌ ಪೋಚಾವರಂ, ಸಂಗಮೇಶ, ಸ್ಯಾಮುವೆಲ್‌, ಎಇಇ ಅಶೋಕ ತಳವಾಡೆ, ಜೆಸ್ಕಾಂ ಎಇಇ ಮಹೇಂದ್ರಕುಮಾರ ಸಿಂಧೆ, ಅರುಣ ಪವಾರ, ರಾಮಚಂದ್ರ ಜಾಧವ, ಗುತ್ತಿಗೆದಾರ ಸಂಜೀವಕುಮಾರ ಮನೋಜಕುಮಾರ, ವೆಂಕಟರೆಡ್ಡಿ ಕಸ್ತೂರಿ ಇದ್ದರು. ಪ್ರಾಚಾರ್ಯ ಗಣಪತಿ ಸ್ವಾಗತಿಸಿದರು. ಶರಣಗೌಡ ಪಾಟೀಲ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next