Advertisement

ಗಡಿ ತಂಟೆ: ಗೌಡರಿಗೂ ಕೇಂದ್ರ ಮಾಹಿತಿ

03:45 AM Jul 16, 2017 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಸಿಕ್ಕಿಂಗೆ ಹೊಂದಿಕೊಂಡಂತೆ ಇರುವ ಪ್ರದೇಶ ದಲ್ಲಿ ಚೀನಾ ಗಡಿ ತಗಾದೆ ಎತ್ತಿರುವುದರಿಂದ ಉಂಟಾಗಿರುವ ಸ್ಥಿತಿ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಾಯಕರ ನಡುವಿನ ಸಭೆ ಶನಿವಾರವೂ ಮುಂದುವರಿದಿದೆ.

Advertisement

ಮಾಜಿ ಪ್ರಧಾನಿ, ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಭಾಗಿಯಾದ ಪ್ರಮುಖರಲ್ಲಿ ಒಬ್ಬರು. ಈ ಸಂದರ್ಭದಲ್ಲಿ ಎರಡೂ ಸ್ಥಳಗಳಲ್ಲಿನ ಉದ್ವಿಗ್ನ ಸ್ಥಿತಿ ಶಮನಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಜೆಡಿಎಸ್‌, ಸಿಪಿಐ, ಆರ್‌ಎಸ್‌ಪಿ, ಜೆಎಂಎಂ, ಸಿಕ್ಕಿಂ ಡೆಮಾಕ್ರಾಟಿಕ್‌ ಫ್ರಂಟ್‌,ಅಕಾಲಿ ದಳ ಸೇರಿದಂತೆ ಒಟ್ಟು 11 ಪಕ್ಷಗಳ ನಾಯಕರ ಜತೆ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್‌, ರಕ್ಷಣಾ ಸಚಿವ ಜೇಟ್ಲಿ,ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯನ್‌ ಜೈಶಂಕರ್‌, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಮಾತುಕತೆ ನಡೆಸಿ, ತಾಜಾ ಸ್ಥಿತಿ ಬಗ್ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next