ಚಂಡೀಗಢ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್ ಎಫ್(ಗಡಿ ಭದ್ರತಾ ಪಡೆ) ಶುಕ್ರವಾರ(ಫೆ.19, 2021) 50 ಕೋಟಿ ರೂಪಾಯಿ ಮೌಲ್ಯದ ಹತ್ತು ಕೆಜಿ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಿಎಫ್ಐ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ ಗೃಹ ಸಚಿವ ಬೊಮ್ಮಾಯಿ
ಬೆಳಗ್ಗಿನ ಜಾವದ ಮಂಜು ಮುಸುಕಿದ ವಾತಾವರಣದಲ್ಲಿ ಪಾಕಿಸ್ತಾನದ ಮಾದಕ ದ್ರವ್ಯ ಸ್ಮಗ್ಲರ್ಸ್ ಗಳು ಬಿಎಸ್ ಎಫ್ ನ 29ನೇ ಬೆಟಾಲಿಯನ್ ಚೆಕ್ ಪಾಯಿಂಟ್ ಪ್ರದೇಶದಲ್ಲಿ ಹತ್ತು ಕೆಜಿ ಹೆರಾಯಿನ್ ಅನ್ನು ಕಾನೂನು ಬಾಹಿರವಾಗಿ ಸಾಗಿಸಲು ಯತ್ನಿಸಿದ್ದರು ಎಂದು ವರದಿ ವಿವರಿಸಿದೆ.
ಮಾದಕ ದ್ರವ್ಯ ಕಳ್ಳಸಾಗಾಣಿಕೆದಾರರ ಚಲನವಲನ ಗಮನಿಸಿದ ಬಿಎಸ್ ಎಫ್ ಪಡೆ ಕೂಡಲೇ ಸ್ಥಳದತ್ತ ಧಾವಿಸಿತ್ತು. ಆದರೆ ಕೆಲವು ಸ್ಮಗ್ಲರ್ಸ್ ಪರಾರಿಯಾಗಿದ್ದು, ಹತ್ತು ಕೆಜಿ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆನ್ನಟ್ಟಿ ಹೋದ ಬಿಎಸ್ ಎಫ್ ಮತ್ತು ಪಂಜಾಬ್ ವಿಶೇಷ ಪೊಲೀಸ್ ತಂಡ ಇಬ್ಬರನ್ನು ಬಂಧಿಸಿತ್ತು. ಪ್ರದೇಶದ ಸುತ್ತಲೂ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಬಿಎಸ್ ಎಫ್ ಮೂಲಗಳು ತಿಳಿಸಿವೆ.