Advertisement

Border-Gavaskar series: ಭಾರತೀಯರಿಗೆ ವಿಶೇಷ ಆಸನ

10:18 PM May 14, 2024 | Team Udayavani |

ಮೆಲ್ಬರ್ನ್: ಈ ಬಾರಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಬೋರ್ಡರ್‌-ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ವೇಳೆ, ಭಾರತೀಯ ಅಭಿಮಾನಿಗಳಿಗಾಗಿ ವಿಶೇಷ ಆಸನ ವ್ಯವಸ್ಥೆ ಮಾಡುವುದಾಗಿ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ಹೇಳಿದೆ.

Advertisement

ಮೆಲ್ಬರ್ನ್, ಸಿಡ್ನಿ ಸೇರಿದಂತೆ 5 ಮೈದಾನಗಳಲ್ಲಿ ಭಾರತ-ಆಸ್ಟ್ರೇಲಿಯ ನಡುವೆ ಟೆಸ್ಟ್‌ ಪಂದ್ಯಗಳನ್ನು ಆಡಲಾಗುವುದು. ಈ ಎಲ್ಲ ಮೈದಾನಗಳಲ್ಲೂ ಭಾರತದ ವೀಕ್ಷಕರಿಗೆ ವಿಶೇಷ ವ್ಯವಸ್ಥೆ ಮಾಡುವುದಾಗಿ “ಕ್ರಿಕೆಟ್‌ ಆಸ್ಟ್ರೇಲಿಯ’ ತಿಳಿಸಿದೆ.

ಇದಕ್ಕೆ “ಇಂಡಿಯನ್‌ ಫ್ಯಾನ್‌ ಪಾರ್ಕ್‌’ ಎಂದು ಹೆಸರಿಡಲಾಗಿದ್ದು, ಭಾರತ ತಂಡದ ಅಭಿಮಾನಿಗಳು ಇಲ್ಲಿ ತಮ್ಮ ಆಸನವನ್ನು ಕಾದಿರಿಸಬಹುದಾಗಿದೆ. ಇತರ ಜಾಗದಲ್ಲೂ ಭಾರತೀಯರಿಗೆ ಟಿಕೆಟ್‌ ಖರೀದಿಸಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next