Advertisement
ಧಾರವಾಡದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ತಂಟೆ ಬಹಳ ವರ್ಷಗಳಿಂದ ನಡೆದು ಬಂದಿದೆ. ಕೊನೆಗೆ ಬೇರೆ ಬೇರೆ ಕಮಿಷನ್ ಹಾಗೂ ವರದಿಗಳಾಗಿವೆ. ಅದೇ ರೀತಿ ಮಹಾಜನ್ ಎಂಬ ವರದಿ ಕೂಡಾ ಕೊಟ್ಟಾಗಿದೆ. ಎರಡು ರಾಜ್ಯಗಳು ಆ ಸಂದರ್ಭದಲ್ಲಿ ಮಹಾಜನ್ ವರದಿ ಒಪ್ಪಿಕೊಂಡಿವೆ. ವರದಿಯಂತೆ ಬೆಳಗಾವಿ ಕರ್ನಾಟಕದಲ್ಲೇ ಉಳಿಯಲಿದೆ. ಮಹಾಜನ್ ವರದಿ ಪೈನಲ್ ಆಗಿದೆ ಎಂದರು.
Related Articles
Advertisement
ಪ್ರತಿ ಬಾರಿ ಎರಡು ಕಡೆ ಒಂದೇ ಸರಕಾರ ಇದೆ ಎಂದು ಹೇಳುವದು ಬೇಡ. ಹಿಂದೆ ಹಲವು ಬಾರಿ ಕಾಂಗ್ರೆಸ್ ಸರಕಾರ ಇತ್ತು. ಆವಾಗಲೂ ಕೂಡಾ ಗಡಿ ತಂಟೆಯಿತ್ತು. ಮಹಾರಾಷ್ಟ್ರ ರಾಜಕಾರಣಿಗಳಿಗೆ ಇದು ಅಭ್ಯಾಸವಾಗಿದೆ. ತಮ್ಮಲ್ಲಿ ಸಮಸ್ಯೆಯಾದರೆ ಗಮನ ಬೇರೆ ಕಡೆ ತೆಗೆದುಕೊಂಡು ಹೋಗಲು ಗಡಿ ವಿಷಯ ತೆಗೆಯುತ್ತಾರೆ. ಜತ್ತ ಜಿಲ್ಲೆಗೆ ನಾನು ಹಲವು ಬಾರಿ ಹೋಗಿದ್ದೆನೆ, ಅಲ್ಲಿಯ ಜನ ಕನ್ನಡವನ್ನೇ ಮಾತನಾಡುತ್ತಾರೆ. ಅವರೆಲ್ಲ ನಮ್ಮ ರಾಜ್ಯಕ್ಕೆ ಬರುವ ಮಾತನ್ನು ಹೇಳಿದ್ದಾರೆ ಎಂದರು.
ಸುನಿಲ್ ಪಕ್ಷಕ್ಕೆ ಸೆರ್ಪಡೆ ಮಾಹಿತಿ ಇಲ್ಲ: ರೌಡಿ ಶೀಟರ್ ಸೈಲೆಂಟ್ ಸುನಿಲ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಬಗ್ಗೆ ನನಗೆ ಮಾಹಿತಿ ಇಲ್ಲ. ಎಂಪಿ ಅವರ ಪಕ್ಕ ಕುಳಿತಿರಬಹುದು. ಅದು ನಮ್ಮ ಪಕ್ಷದ ಕಾರ್ಯಕ್ರಮ ಕೂಡ ಆಗಿರಲಿಲ್ಲ. ಈ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಏನು ಹಕ್ಕಿದೆ. ಡಿಕೆಶಿ ಕೂಡ ಬೇಲ್ ಮೇಲೆ ಹೊರಗಡೆ ಇಲ್ಲವೇ ಎಂದು ಪ್ರಶ್ನಿಸಿದರು