Advertisement

ಬೂತ್ ಕಾರ್ಯಕರ್ತರೇ ಬಿಜೆಪಿ ಪಕ್ಷದ ಮಾಲೀಕರು: ಅರುಣ್ ಸಿಂಗ್

06:50 PM Sep 28, 2022 | Team Udayavani |

ಕಲಬುರಗಿ: ಸಾಮಾನ್ಯ ಕಾರ್ಯಕರ್ತರ ಗುರುತಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಏಕೈಕ ಪಕ್ಷ ದೇಶದಲ್ಲಿ ಇದ್ದರೆ ಅದು ಬಿಜೆಪಿ ಪಕ್ಷ. ಹೀಗಾಗಿ ಪಕ್ಷದ ಕಾರ್ಯಕರ್ತರೆ ನಮ್ಮ ಮಾಲೀಕರು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬುಧವಾರ ಹೇಳಿದರು.

Advertisement

ಜೇವರ್ಗಿ ತಾಲೂಕಿನ ಶಕ್ತಿ ಕೇಂದ್ರದ ಪ್ರಮುಖ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಕೇವಲ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾತ್ರ ಯಜಮಾನರು.ಆದರೆ ನಮ್ಮಲ್ಲಿ ಕಾರ್ಯಕರ್ತರೇ ನಮ್ಮ ಜೀವಾಳ ಎಂದರು.

ಇದನ್ನೂ ಓದಿ: ಪ್ರಿಯಾಂಕ್‌ ಸೋಲಿಸಲು ಬಿಜೆಪಿ ಹೆಣೆಯುತ್ತಿದೆ ತಂತ್ರ; ಸವದಿ ಸಮ್ಮುಖ ಗುಪ್ತ ಸಭೆ

ಕಾಂಗ್ರೆಸ್ ಪಕ್ಷ ಯಾವ ಉದ್ದೆಶದಿಂದ ಭಾರತ್ ಜೋಡೋ ಅಭಿಯಾನ ಹಮ್ಮಿಕೊಂಡಿದೆ ತಿಳಿಯದ ಸಂಗತಿ, ಆದರೆ ಕಾಂಗ್ರೆಸ್ ಪಕ್ಷದ ನಾಯಕರೇ ತಿಳಿದುಕೊಳ್ಳಿ,ಭಾರತ ಆಧ್ಯಾತ್ಮಿಕವಾಗಿ, ಧಾಮಿ೯ಕವಾಗಿ ಯಾವತ್ತೂ ಒಗ್ಗಾಟಾಗಿದೆ.ಕಾಂಗ್ರೆಸ್ ಪಕ್ಷ ತಮ್ಮ ಪಕ್ಷವನ್ನು ಜೋಡಿಸುವ ಅಭಿಯಾನ ಮಾಡಬೇಕು. ರಾಹುಲ್ ಗಾಂಧಿ ಮೊದಲು ಈ ಕರಿತು ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಕಿಚಾಯಿಸಿದರು.

ಮೋದಿ-ಯೋಗಿ ಆಡಳಿತದಿಂದ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಒಳ್ಳೆಯ ಆಡಳಿತ ನೀಡಿದ್ದು,ಮುಂಬರುವ ಚುನಾವಣೆಯಲ್ಲಿ 150ಕ್ಕಿಂತ ಅಧಿಕ ಸ್ಥಾನ ಬಿಜೆಪಿ ಗೆಲ್ಲಲಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೈಗಳಿಗೆ ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡು ಜಗಳವಾಡುವ ಕಾಲ ಬರುತ್ತದೆ, ಕಾದು ನೋಡಿ ಎಂದರು.

Advertisement

ದೇಶದ ಅಭಿವೃದ್ಧಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಡಬಲ್ ಇಂಜಿನ್ ಸಕಾ೯ರವನ್ನು ಗೆಲ್ಲಿಸುವ ಪಣವನ್ನು ಪ್ರತಿ ಬೂತ್ ನ ಕಾಯ೯ಕತ೯ ಸಂಕಲ್ಪ ತೊಡಬೇಕಾಗಿದೆ ಎಂದರು.

ಸಂಸದ ಉಮೇಶ್ ಜಾಧವ್ ,ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ದೊಡ್ಡಪ್ಪಗೌಡ ಪಾಟೀಲ್ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮಡು, ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಧಮ೯ಣ್ಣ ದೊಡ್ಡಮನಿ, ಗುರುರಾಜ ಜಾಂತಿಕರ್,ಅಮರನಾಥ ಪಾಟೀಲ್, ಧಮ೯ಣ್ಣ ಇಟಗಾ,ಶೋಭಾ ಬಾಣಿ ಸೇರಿದಂತೆ ಮಂಡಲ ಅಧ್ಯಕ್ಷರು,ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next