Advertisement

ಬೂಸ್ಟರ್‌ಡೋಸ್‌: ಕೋರ್ಬೆವ್ಯಾಕ್ಸ್‌ಗೆ ಅನುಮತಿ

11:01 PM Jun 04, 2022 | Team Udayavani |

ಹೈದರಾಬಾದ್‌: ಹೈದರಾಬಾದ್‌ನ ಬಯಲಾಜಿಕಲ್‌ ಇ ಸಂಸ್ಥೆ ಸಂಶೋಧಿಸಿ, ಅಭಿವೃದ್ಧಿಗೊಳಿಸಿದ ಕೊರ್ಬೆವ್ಯಾಕ್ಸ್‌ ಅನ್ನು ಬೂಸ್ಟರ್‌ ಡೋಸ್‌ ಆಗಿ ನೀಡಲು ಅನುಮತಿ ಲಭಿಸಿದೆ.

Advertisement

ಈ ಬಗ್ಗೆ ಭಾರತದ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದ್ದಾರೆ ಎಂದು ಸಂಸ್ಥೆ ಶನಿವಾರ ಪ್ರಕಟಿಸಿದೆ.

18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಅದನ್ನು ನೀಡಬಹುದಾಗಿದೆ.

ಕೊವ್ಯಾಕ್ಸಿನ್‌ ಅಥವಾ ಕೊವಿಶೀಲ್ಡ್‌ನ ಎರಡನೇ ಡೋಸ್‌ ಪಡೆದುಕೊಂಡು ಆರು ತಿಂಗಳು ಪೂರ್ತಿಯಾದ ಬಳಿಕ ಬೂಸ್ಟರ್‌ ಡೋಸ್‌ ತೆಗೆದುಕೊಳ್ಳಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next