Advertisement
ಇದು ಕಂಡು ಬಂದಿದ್ದು, ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಎಂಜಿಎಂ ಪುಸ್ತಕೋತ್ಸವ ಕಾರ್ಯಕ್ರಮದಲ್ಲಿ. ಕನ್ನಡ ಪುಸ್ತಕ ಪ್ರಾಧಿಕಾರ, ನವಕರ್ನಾಟಕ, ಮಣಿಪಾಲ್ ಯೂನಿವರ್ಸಲ್ ಪ್ರಸ್, ಭಾರತ್ ಬುಕ್ ಮಾರ್ಕ್, ಬಿಬ್ಲಿಯೋಸ್, ಸ್ಕೂಲ್ ಬುಕ್ ಕಂಪೆನಿ ಸೇರಿದಂತೆ 15ಕ್ಕೂ ಅಧಿಕ ಮಳಿಗೆಗಳು ಲಭ್ಯವಿದ್ದವು. ಹಲವಾರು ಮಂದಿ ಪ್ರಕಾಶಕರು, ಲೇಖಕರೂ ಕೂಡ ಸ್ಥಳದಲ್ಲಿದ್ದರು. ಸ್ಥಳೀಯ ಸಹಿತ ಜಿಲ್ಲೆ, ರಾಜ್ಯ, ಹೊರದೇಶಗಳ ಲೇಖಕರು ಬರೆದ ಪುಸ್ತಕಗಳೂ ಶೇ.10ರಿಂದ ಶೇ.70 ರಿಯಾಯಿತಿ ದರದಲ್ಲಿ ಲಭ್ಯವಿದ್ದವು. ಕುಂದಾಪುರ ಕನ್ನಡ ನಿಘಂಟು ಪುಸ್ತಕಗಳು 100 ರೂ. ರಿಯಾಯಿತಿ ದರದಲ್ಲಿ ಮಾರಾಟವಾದವು.
ಯುವ ಓದುಗರನ್ನು ಆಕರ್ಷಿಸಲು ವಿವಿಧ ರೀತಿಯ ಆಫರ್‌ಗಳನ್ನು ನೀಡಲಾಗಿತ್ತು. ಲೇಖಕ ಮಂಜುನಾಥ್ ಕಾಮತ್ ಅವರ “ನಾನು ಸನ್ಯಾಸಿಯಾಗಲು ಹೊರಟಿದ್ದೆ’, “ದಾರಿ ತಪ್ಪಿಸು ಓ ದೇವರೆ’, ಚೆಂದದ ಹಲ್ಲಿನ ಹುಡುಗಿ’ ಈ ಮೂರು ಪುಸ್ತಕಗಳನ್ನು ಕೊಂಡರೆ ಎನ್ 95 ಮಾಸ್ಕ್, ಬಟ್ಟೆ ಚೀಲ ಜತೆಗೆ ಶೇ.10 ರಿಯಾಯಿತಿ ಲಭ್ಯವಿದ್ದವು. ಇದರೊಂದಿಗೆ ಸೆಲ್ಫಿà ಸ್ಟಾಂಡ್, ಪುಸ್ತಕದ ಸಾರಾಂಶ ನೋಡಿ ಖರೀದಿಸುವ ಸಪ್ರೈಸ್ ಬುಕ್ ಇತ್ಯಾದಿ ಆಕರ್ಷಣೆಗಳೂ ಕಂಡು ಬಂದವು. ಸಾಹಿತ್ಯ ಕೃತಿಗಳಿಗಿಂತಲೂ ಮಹಾನ್ ವ್ಯಕ್ತಿಗಳಜೀವನ ಚರಿತ್ರೆ, ಸ್ಫೂರ್ತಿದಾಯಕ ಕಥೆಗಳು ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾದವು. ಸ್ಟೀವ್ ಜಾಬ್ಸ್, ಸ್ಟೀಫನ್ ಹ್ಯಾಕಿಂಗ್, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಷೇಕ್‌ಸ್ಪಿಯರ್‌ನ ಮಹಾನಾಟಕ ಪುಸ್ತಕಗಳನ್ನು ಹೆಚ್ಚಿನ ಓದುಗರು ಆಯ್ಕೆ ಮಾಡಿಕೊಂಡರು.
Related Articles
ಕಾರ್ಯಕ್ರಮದ ಹೊರಭಾಗದಲ್ಲಿ ಪುಸ್ತಕ ದಾನ ಕೌಂಟರ್ ಅನ್ನು ಮಾಡಲಾಗಿತ್ತು. ಖರೀದಿಸಿದ ಯಾವುದೇ ಪುಸ್ತಕವನ್ನು ಹೆಸರಿನ ಜತೆಗೆ ದಾನ ಮಾಡಬಹುದಾಗಿತ್ತು. ಹಳೆಯ ಪುಸ್ತಕಗಳನ್ನೂ ಇಲ್ಲಿ ನೀಡಬಹುದಾಗಿತ್ತು. ಹೀಗೆ ಒಟ್ಟಾದ ಪುಸ್ತಕಗಳನ್ನು ಉಡುಪಿಯ ಕನ್ನಡ ಶಾಲೆಗಳಿಗೆ ಹಂಚಲಿದ್ದೇವೆ. ಪ್ರಾಥಮಿಕ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸಲು ಇದು ಪುಟ್ಟ ಪ್ರಯತ್ನ ಎನ್ನುತ್ತಾರೆ ಉಪನ್ಯಾಸಕ ಮಂಜುನಾಥ್ ಕಾಮತ್.
Advertisement