Advertisement

ಶಿಕ್ಷಣ ಇಲಾಖೆ ‘ಬುಕ್‌ಬ್ಯಾಂಕ್‌’ಗೆ ಉತ್ತಮ ಸ್ಪಂದನೆ

01:37 PM Aug 07, 2021 | Team Udayavani |

ವರದಿ: ಬಸವರಾಜ ಹೂಗಾರ

Advertisement

ಹುಬ್ಬಳ್ಳಿ: ಹಿಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಶಾಲೆಗೆ ಮರಳಿಸಿ ಎಂಬ ಶಿಕ್ಷಣ ಇಲಾಖೆಯ ಬುಕ್‌ ಬ್ಯಾಂಕ್‌ ಯೋಜನೆಗೆ ವಿದ್ಯಾರ್ಥಿಗಳು-ಪಾಲಕರಿಂದ ಉತ್ತಮ ಸ್ಪಂದನೆ ದೊರೆತಿದೆ.

1-10ನೇ ತರಗತಿವರೆಗೆ ಶೇ. 60 ವಿದ್ಯಾರ್ಥಿಗಳು ಹಿಂದಿನ ವರ್ಷದ ತಮ್ಮ ಪಠ್ಯ-ಪುಸ್ತಕಗಳನ್ನು ಶಾಲೆಗೆ ಹಿಂದಿರುಗಿಸಿ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳಿಂದ ಪಡೆದ ಪಠ್ಯ-ಪುಸ್ತಕಗಳನ್ನು ಇಲಾಖೆ ಹೊಸದಾಗಿ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಇದೊಂದು ರೀತಿಯಲ್ಲಿ ರಾಷ್ಟ್ರೀಯ ಉಳಿತಾಯ ರೂಪ ಪಡೆದಿದೆ ಎಂದರೂ ತಪ್ಪಾಗಲಾರದು. ಜತೆಗೆ ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕ ಲಭ್ಯವಾಗುವಂತೆ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುವ ಯತ್ನ ಮಾಡುತ್ತಿದೆ.

1 ರಿಂದ 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲ ಮಕ್ಕಳು ಪುಸ್ತಕಗಳನ್ನು ಮರುಳಿ ನೀಡುತ್ತಿದ್ದು, ಇಲ್ಲಿಯವರೆಗೆ ಎಲ್ಲ ಭಾಷೆಯ ಹಾಗೂ ವಿಷಯಗಳ ಸುಮಾರು 25 ಸಾವಿರಕ್ಕೂ ಅಧಿಕ ಪಠ್ಯ-ಪುಸ್ತಕಗಳು ಶಹರ ವ್ಯಾಪ್ತಿಯ ಶಾಲೆಗಳಿಗೆ ಬಂದಿವೆ. ಇದೇ ಪುಸ್ತಕಗಳನ್ನು ಈ ವರ್ಷದ ಮಕ್ಕಳಿಗೆ ನೀಡುವ ಮೂಲಕ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ.

ಎಲ್ಲ ಶಾಲೆಗಳಲ್ಲಿ ಶೇ.60ಕ್ಕೂ ಹೆಚ್ಚು ಮಕ್ಕಳು ಪುಸ್ತಕಗಳನ್ನು ಮರಳಿ ಶಾಲೆಗೆ ನೀಡಿದ್ದು, ಇನ್ನುಳಿದ ಶೇ.40 ಮಕ್ಕಳು ಪುಸ್ತಕಗಳನ್ನು ಮರಳಿ ಶಾಲೆಗೆ ನೀಡಬೇಕಾಗಿದೆ. ಒಟ್ಟು ಸುಮಾರು 50 ಸಾವಿರದಷ್ಟು ಪಠ್ಯ-ಪುಸ್ತಕಗಳು ಮರಳುವ ವಿಶ್ವಾಸ ಶಿಕ್ಷಣ ಇಲಾಖೆಯದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next