Advertisement
ಸುಮಾರು 87 ಲೇಖನಗಳನ್ನು ಹೊಂದಿರುವ “ಗೂಡೆ’ಯು ಕ್ರಾಂತಿಕಾರಿ ಸಾಹಿತಿ ಲಕ್ಷ್ಮಣ್ ಅವರ ಪತ್ರಿಕಾ ಲೇಖನಗಳ ಸಂಗ್ರಹವಾಗಿದ್ದು, ಹಲವು ಹೊಸ ವಿಷಯಗಳ ಗಣಿಯಾಗಿದೆ. ಈಗಿನವರಿಗೆ “ಗೂಡೆ’ ಶಬ್ದದ ಅರ್ಥವೇ ಗೊತ್ತಿಲ್ಲ. ಒಂದು ಸಮುದಾಯದ ಮದುವೆಗಳಲ್ಲಿ ಮುಹೂರ್ತಕ್ಕೆ ಬೇಕಾದ ಎಲ್ಲ ಸುಮಂಗಲ ವಸ್ತುಗಳನ್ನು ಹೊತ್ತು ತರುವುದಕ್ಕೆ ಗೂಡೆ ಎನ್ನುತ್ತಿದ್ದರು. ಗೂಡೆಯ ಬಗ್ಗೆ ಇನ್ನಷ್ಟು ವಿವರವಾಗಿ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಗೂಡೆಯು ಹಸಿವು ನೀಗಿ ಸುವ ಮತ್ತು ಸಂಪ್ರದಾಯ ಗಳನ್ನು ಮೆರೆಸುತ್ತಿದ್ದ ವಿಷ ಯವೂ ಆಗಿತ್ತು ಎಂಬುದನ್ನು ಲೇಖಕರು ತಿಳಿಸುತ್ತಾರೆ.
Related Articles
Advertisement
ತತ್ವಪದ ನಾರಾಯಣಪ್ಪ, ಇಸ್ಮಾಯಿಲ್‌ನಂತಹ 12 ವರ್ಷದ ಮುಸ್ಲಿಂ ಬಾಲಕನ ಬದುಕಿನ ಚಿತ್ರಣವನ್ನು ಈ ಕೃತಿಯಲ್ಲಿ ವಿಚಾರದ ಸಂಘ ರ್ಷದೊಂದಿಗೆ ಲೇಖಕರು ನಮಗೆ ನೀಡಿದ್ದಾರೆ. ಅವರ ಬದುಕಿನ ಸಂದಿಗ್ಧತೆ ಹಾಗೂ ಸರಕಾರದ ಯೋಜನೆಗಳ ಅಸ ಮರ್ಪಕ ಜಾರಿ ಕುರಿತಾದ ಚಿತ್ರಣವೂ ಇದರಿಂದ ಸಿಗುತ್ತದೆ.
ನಮ್ಮ ಆಡಳಿತ ವ್ಯವಸ್ಥೆಯಲ್ಲಿರುವ ಲೋಪ ಗಳ ಬಗ್ಗೆ ಈ ಕೃತಿಯು ವಿವರಿಸುತ್ತದೆ. ಈ ಕೃತಿಯನ್ನು ಓದಿ ಮುಗಿಸಿದಾಗ ಹಲವು ಪ್ರಶ್ನೆಗಳು ನಮ್ಮ ಮನಸ್ಸುಗಳನ್ನು ಆವರಿಸಿ ಕೊಳ್ಳುತ್ತವೆ. ಅವುಗಳಿಗೆ ಉತ್ತರ ಕೊಡುವುದು ಅಥವಾ ಉತ್ತರ ಹುಡುಕುವುದು ಸುಲಭದ ಕೆಲಸವೇನಲ್ಲ. ಲೇಖನಗಳು ಓದುಗನ ವಿಚಾರವನ್ನು ವಿಸ್ತಾರಗೊಳಿಸುತ್ತಾ, ನಮ್ಮ ವ್ಯವಸ್ಥೆಯನ್ನು ವಿಶ್ಲೇಷಿಸುತ್ತಾ ಸಾಗುವ ಕಾರಣ ಓದುಗನ ಜ್ಞಾನವೃದ್ಧಿಯೂ ಆಗುತ್ತದೆ.
ಈ ಕೃತಿಯನ್ನು ಓದಿದ ಬಳಿಕ ಎಲ್ಲರ ಮನಸ್ಸಲ್ಲೂ ವಿಮರ್ಶೆ ನೆಲೆಯೂರುವುದು ಖಚಿತ. ನಾವು ಸರಿ ಎಂದು ನಂಬಿದ್ದರಲ್ಲೂ ಲೋಪಗಳಿವೆ ಎಂಬುದು ಈ ಕೃತಿಯ ಮೂಲಕ ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ಅಂಥ ಅದ್ಭುತ ಕೃತಿಯನ್ನು ಓದುವುದರಿಂದ ನಮ್ಮ ಜ್ಞಾನವೃದ್ಧಿ ಹಾಗೂ ಚಿಂತನೆ ಶಕ್ತಿ ಹರಿತವಾಗುವುದು ಖಚಿತ.
– ಪರಶುರಾಮ ಎ., ಬೆಂಗಳೂರು