ಪಿವಿಎಸ್ ಜಂಕ್ಷನ್ ಬಳಿಯ ಎಂ.ಜಿ. ರೋಡ್‌ನ ಔಷಧ ಅಂಗಡಿ ಯೊಂದರ ಮಾಲಕ ಶ್ರೀಪತಿ ಅವರು ತನ್ನ ಪುತ್ರನಿಗಾಗಿ ಫ್ಲಿಪ್ ಕಾರ್ಟ್‌ನಲ್ಲಿ ನಿಕಾನ್ ಡಿ 5-200 ಡಿಎಸ್‌ಎಸ್‌ಆರ್ ಕೆಮರಾಕ್ಕೆ ಆರ್ಡರ್ ಮಾಡಿದ್ದರು. ಇದರ ಬೆಲೆ 35,595 ರೂ. ವಸ್ತು ಕೈಗೆ ಸಿಗುವಾಗ ನಗದು (ಕ್ಯಾಶ್ ಆನ್ ಡೆಲಿವರಿ) ಪಾವತಿಸಬೇಕಿತ್ತು.
Advertisement
ಬೆಳಗ್ಗೆ 10 ಗಂಟೆ ವೇಳೆಗೆ ಬುಕ್ ಮಾಡಿದ ವಸ್ತು ಶ್ರೀಪತಿ ಅವರಿಗೆ ಡೆಲಿವರಿ ಆಗಿದ್ದು, ಅವರು ಪಾರ್ಸೆಲ್ ತಂದ ವ್ಯಕ್ತಿಗೆ 35,595 ರೂ. ನಗದು ಪಾವತಿಸಿ ದ್ದರು. ಬಾಕ್ಸ್‌ನ್ನು ಆತನ ಸಮ್ಮುಖ ದಲ್ಲಿಯೇ ತೆರೆದು ಪರಿಶೀಲಿಸಿದಾಗ ಅಚ್ಚರಿ ಕಾದಿತ್ತು. ಕೆಮರಾದ ಬಾಕ್ಸ್ ನಲ್ಲಿ ಕೆಮರಾ ಬದಲು ಗಣಪತಿ ವಿಗ್ರಹ, ಫ್ಯಾಕ್ಸ್ ಮೆಶಿನ್‌ನ ರೋಲ್, ಹಳೆಯ ಕ್ಯಾನ್‌ನಲ್ಲಿ ತುಂಬಿಸಿದ ಬ್ರೇಕ್ ಆಯಿಲ್ ಕಂಡು ಬಂತು. ಜತೆಗೆ ಇದರಲ್ಲಿ ಕೆಮರಾ ಇದೆ ಎಂದು ನಂಬಿಸಲು 16 ಜಿಬಿ ಎಸ್‌ಡಿ ಕಾರ್ಡ್, ಮೆಮೊರಿ ಕಾರ್ಡ್, ಕೆಮರಾ ಪೌಚ್‌ನ್ನು ಇರಿಸಲಾಗಿತ್ತು. ಕೆಮರಾ ಹೊರತುಪಡಿಸಿ ಉಳಿದ ಎಲ್ಲವೂ ಅದರಲ್ಲಿತ್ತು. ತನಗೆ ಫ್ಲಿಪ್‌ಕಾರ್ಟ್ ಸಂಸ್ಥೆ ಅಥವಾ ಡೆಲಿವರಿ ವ್ಯವಸ್ಥೆ ಮಾಡುವವರಿಂದ ಮೋಸ ಆಗಿದೆ ಎಂದು ಶ್ರೀಪತಿ ಅವರಿಗೆ ಮನವರಿಕೆ ಯಾಗಿದ್ದು, ಅವರು ಪಾರ್ಸೆಲ್ ಡೆಲಿವರಿ ಮಾಡಿದ ಕೊರಿಯರ್ ಸಂಸ್ಥೆಯ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂಡು ಕೊಟ್ಟ ಹಣ ವಾಪಸ್ ಪಡೆದು ಕೊರಿಯರ್ ಪಾರ್ಸೆಲನ್ನು ಹಿಂದಿರುಗಿಸಿದರು.