Advertisement

ಮಕ್ಕಳಿಗೆ ಪುಸ್ತಕ, ಊಟದ ಬಾಕ್ಸ್ ವಿತರಣೆ

01:28 PM Jan 27, 2021 | Team Udayavani |

ರಾಮನಗರ: ಸಮಾಜದ ಸಹೃದಯಿಗಳು ನೀಡುವ ಪಠ್ಯ ಪರಿಕರಗಳನ್ನು ಶಾಲಾ ಮಕ್ಕಳು ಸದ್ಬಳಕೆ ಮಾಡಿಕೊಂಡು ಶಿಕ್ಷಣದ ಜೊತೆಗೆ, ಉನ್ನತ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ವಕೀಲ ರಾಜಶೇಖರ ಹೇಳಿದರು.

Advertisement

72ನೇ ಗಣರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಇಲ್ಲಿನ ಇರಳಿಗರ ಕಾಲೋನಿಯ ಬಳಿ ರಾಮಗಿರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 40ಕ್ಕೂ ಹೆಚ್ಚು ಮಕ್ಕಳಿಗೆ ಕನಕಪುರ ತಾಲೂಕು ಗಾಣಾಳು ಗ್ರಾಮದ ಮಾತೃಭೂಮಿ ಫೌಂಡೇಷನ್‌ ಮತ್ತು ಕಾನೂನುಜಾಗೃತಿ ಸಮಿತಿಯವರು ಪಠ್ಯ ಪರಿಕರ ಹಾಗೂ ಊಟದ ಬಾಕ್ಸ್‌ ಗಳನ್ನು ವಿತರಿಸಿ ಮಾತನಾಡಿದರು.

ಇದನ್ನೂ ಓದಿ:ರಿಂಗ್‌ ರಸ್ತೆ ಸ್ವತ್ಛತೆಗೆ ಆರು ತಂಡ ರಚನೆ

ಕೊರೊನಾ ಸಂಕಷ್ಟದ ನಡುವೆಯೂ ಹಲವು ಸಂಘ-ಸಂಸ್ಥೆಗಳು ಜನ ಕಲ್ಯಾಣ ಹಾಗೂ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ಥಕ ಕೆಲಸಗಳನ್ನು ಮಾಡುತ್ತಿವೆ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ನೀಡಿದ ಪರಿಕರಗಳನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಮಕ್ಕಳಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.

ಮಾತೃಭೂಮಿ ಫೌಂಡೇಷನ್‌ ಮತ್ತು ಕಾನೂನು ಜಾಗೃತಿ ಸಮಿತಿ ಅಧ್ಯಕ್ಷ, ವಕೀಲ ಕೆ.ಲೋಕೇಶ್‌, ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ ಹಾಗೂ ಮತ್ತಿತರರು

Advertisement

ಮಾತನಾಡಿದರು. ಮುಖಂಡರಾದ ಸಿ.ಎಸ್‌.ಜಯಕುಮಾರ್‌, ಚಂದ್ರು, ನೀಲೇಶ್‌ ಜಾಧವ್‌, ಸಮಿತಿ ಪದಾಧಿಕಾರಿಗಳಾದ ಸತೀಶ್‌, ಮುತ್ತುರಾಜು, ಚಂದ್ರೇಶ್‌, ವಕೀಲರಾದ ನಾಗರಾಜು, ಮುರಳಿ, ಶಶಿ, ಮುರಳಿ ಮೋಹನ್‌, ಅನಿಲ… ಕುಮಾರ್‌, ಪ್ರಶಾಂತ್‌, ಸಹ ಶಿಕ್ಷಕ ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next