Advertisement

ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾನಿಗಳ ಸಹಕಾರ ಅಗತ್ಯ

02:32 PM Nov 29, 2020 | Suhan S |

ಗೌರಿಬಿದನೂರು: ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡು ಉತ್ತಮ ಶಿಕ್ಷಣಉದ್ಯೋಗ ಪಡೆಯಲು ದಾನಿಗಳ ಸಹ ಕಾರ ಮುಖ್ಯ ಎಂದು ಕೆ.ಆರ್‌.ಸ್ವಾಮಿ ವಿವೇಕಾನಂದ ಫೌಂಡೇಷನ್‌ ಅಧ್ಯಕ್ಷ ಡಾ.ಕೆಂಪರಾಜು ತಿಳಿಸಿದರು.

Advertisement

ತಾಲೂಕಿನ ಕುದುರೆ ಬ್ಯಾಲೆ ಗ್ರಾಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಪುಸ್ತಕ ಹಾಗೂ ಇತರ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ಸಮಾಜವು ಎಲ್ಲರಂಗಗಳಲ್ಲಿ ಮುಂದೆ ಬರಬೇಕಾದರೆ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕು. ಈ ನಿಟ್ಟಿನಲ್ಲಿ ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ವಕೀಲರಾದ ಹೆಚ್‌.ಎಲ್‌.ವೆಂಕಟೇಶ್‌ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅವರ ಪ್ರತಿಭೆ ಗುರುತಿಸಿ ಅವರಿಗೆ ಸಹಾಯಹಸ್ತ ನೀಡುತ್ತಿರುವ ಕೆಂಪ ರಾಜು ಅವರ ಸೇವೆ ಅಭಿನಂದನೀಯಎಷ್ಟೋವಿದ್ಯಾರ್ಥಿಗಳುಉತ್ತಮ ಶಿಕ್ಷಣ ಹಾಗೂ ಉದ್ಯೋಗ ಪಡೆದು ಉದ್ಯೋಗದ ಜೊತೆಗೆ ಸಮಾಜದಲ್ಲಿನಬಡವರಿಗೆ ಸಹಾಯ ಮಾಡುತ್ತಾರೆ. ಇಂತಹ ಕಾರ್ಯಕ್ರಮಗಳಿಂದ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಅಕಾಲಿಕ ಮಳೆಗೆ ನೆಲಕಚ್ಚಿದ ಭತ್ತ :

ಗುಡಿಬಂಡೆ: ಕಳೆದೆರಡು ದಿನಗಳಿಂದ ನಿವಾರ್‌ ಚಂಡ ಮಾರುತ ಹಿನ್ನೆಲೆ ತಾಲೂಕಿನಲ್ಲಿ ಧಾರಕಾರ ಮಳೆಯಾಗಿದ್ದು, ಲಕ್ಷಾಂತರ ರೂ.ಮೌಲ್ಯದ ಬೆಳೆಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ.

Advertisement

ಭಾರೀ ಮಳೆಗೆ ಕೆರೆಕಟ್ಟೆಗಳಿಗೆ ನೀರು ತಂದಿದ್ದರೂ ರೈತರನ್ನು ಹೈರಾಣಾಗಿಸುವ ಸಾಧ್ಯತೆ ಹೆಚ್ಚಾಗಿದೆ. ತಾಲೂಕಿನ ನಿಚ್ಚನ ಬಂಡಹಳ್ಳಿಯ ಬಳಿ ರೈತ ಅಶ್ವತ್ಥಪ್ಪ ಅವರಿಗೆ ಸೇರಿದ 2 ಎಕರೆ ಪ್ರದೇಶದಲ್ಲಿ ಕಟಾವು ಹಂತಕ್ಕೆ ಬಂದಿದ್ದ ಭತ್ತದ ಬೆಳೆ ಗಾಳಿಯ ತೀವ್ರತೆಗೆ ಸಂಪೂರ್ಣ ನೆಲಕಚ್ಚಿದ್ದು, ಕೈಗೆ ಬಂದ ತುತ್ತುಬಾಯಿಗೆ ಬಾರದಂತಾಗಿದೆ. ಬಹುತೇಕ ಕಡೆಗಳಲ್ಲಿ ರಾಗಿಯುಕೊಯ್ಲುಗೆ ಬಂದಿದೆ ಮತ್ತು ಕೆಲವಡೆ ಈಗಾಗಲೇ ರಾಗಿತೆನೆಕೊಯ್ಯಲಾಗಿದೆ. ಜಡಿ ಮಳೆಯಿಂದ ಕೊಯ್ಲುಗೆ ಬಂದಿರುವ ಮತ್ತು ಕೊಯ್ಯಲಾಗಿರುವ ರಾಗಿಯು ತೆನೆಯಿಂದ ಉದುರಿ ಹಾಳಾಗುವ ಸಾಧ್ಯತೆ ಹೆಚ್ಚಾಗಿವೆ. ಕೊಯ್ಲುಗೆ ಬಂದಿದ್ದ ಬೆಳೆ ನಾಶವಾಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮಳೆಯಿಂದರೇಷ್ಮೆಬೆಳೆಗಾರರು ಸಹ ಕಂಗಾಲಾಗಿದ್ದಾರೆ. ರೇಷ್ಮೆ ಹುಳುಗಳಿಗೆ ಅಧಿಕ ತೇವಾಂಶದ ಜೊತೆಗೆ ಹಿಪ್ಪುನೇರಳೆ ಹವಣಿಸಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next