ಮೈಸೂರು: ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸುವುದರ ಬಗ್ಗೆ ಅನುಮಾನಗಳು ಬೇಡ ಎಂದು ಸಚಿವ ಸಚಿವ ಎಸ್. ಟಿ.ಸೋಮಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾದಾಗ ಸಿದ್ದರಾಮಯ್ಯ ಬೇರೆ ಬೇರೆ ಪ್ಲಾನ್ ನಲ್ಲಿ ಇದ್ದರು. ಏನೇನೋ ಆಗಿ ಬಿಡುತ್ತದೆ ಎಂದು ಲೆಕ್ಕ ಹಾಕಿಕೊಂಡಿದ್ದರು. ಅವರ ಯಾವ ಯೋಜನೆ ಯಶಸ್ವಿಯಾಗಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಸುಮ್ಮನೆ ಸರ್ಕಾರ ಅಲ್ಪಾವಧಿಯ ಅಂತಾ ಹೇಳುತ್ತಿದ್ದಾರೆ ಎಂದರು.
ಸಿಎಂ ಬೊಮ್ಮಾಯಿ ಬಗ್ಗೆ ಮಾತನಾಡಲು ಸಿದ್ದರಾಮಯ್ಯಗೆ ವಿಷಯಗಳೇ ಇಲ್ಲ. ಒಂದಿಬ್ಬರ ಹೇಳಿಕೆಯನ್ನ ಹಿಡಿದುಕೊಂಡು ಸರ್ಕಾರದ ಸ್ಥಿರತೆ ಬಗ್ಗೆ ಮಾಧ್ಯಮದವರು ಚರ್ಚೆ ಮಾಡುವುದು ಬೇಡ. ಸಿಎಂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಬುದ್ದಿವಂತಿಕೆ ಹೊಂದಿದ್ದಾರೆ ಎಂದು ಸೋಮಶೇಖರ್ ಹೇಳಿದರು.
ಇದನ್ನೂ ಓದಿ:ವಾಜಪೇಯಿ ಮತ್ತು ನೆಹರು ಬಗ್ಗೆ ಮಾತು ಮಿತಿ ಮೀರುತ್ತಿವೆ: ಶ್ರೀರಾಮುಲು
ಶಾಸಕ ರಾಮದಾಸ್ ಕುರಿತಾಗಿ ಮಾತನಾಡಿದ ಅವರು, ರಾಮದಾಸ್ ಹಿರಿಯರಿದ್ದಾರೆ. ಅವರು ಸರ್ಕಾರಕ್ಕೆ ಸಲಹೆಗಳನ್ನು ಕೊಟ್ಟಿದ್ದಾರೆ. ನಾನು ಮೊದಲ ಅವಧಿ ಮುಗಿದ ಮೇಲೆ ಮೈಸೂರಿಗೆ ಧನ್ಯತಾ ಪತ್ರ ಬರೆದಿದ್ದೆ. ಆದರೆ ರಾಜಕಾರಣ ಕೆಲವೊಮ್ಮೆ ಬದಲಾಗುತ್ತದೆ. ಈಗ ಮತ್ತೆ ಅವಕಾಶ ಸಿಕ್ಕಿದೆ. ರಾಮದಾಸ್ ಅವರು ಮಾರ್ಗದರ್ಶನದಲ್ಲಿ ಒಂದು ವರ್ಷ ಉಸ್ತುವಾರಿ ಜವಾಬ್ದಾರಿ ಮುಗಿಸಿದ್ದೇನೆ. ಉಳಿದ ಅವಧಿಯಲ್ಲಿಯೂ ಅವರ ಮಾರ್ಗದರ್ಶನದಲ್ಲಿ ಮುಂದುವರೆಸುವೆ. ನಮ್ಮಿಂದ ಎಂದೂ ಅವರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು.