ಬೆಂಗಳೂರು: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡುತ್ತಿದ್ದಾರೆ. 2,53,165 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸುತ್ತಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರ ಪ್ರಸ್ತಾಪಿಸಿರುವ ಸಿಎಂ ಬೊಮ್ಮಾಯಿ, ಮಹಿಳೆಯರಿಗಾಗಿ ಪ್ರತ್ಯೇಕ ಬಜೆಟ್, ಮಕ್ಕಳಿಗಾಗಿ ಪುಟಾಣಿ ಮಂಡನೆ ಮಾಡಲಾಗುತ್ತದೆ ಎಂದರು.
ಯಾವ ಇಲಾಖೆಗೆ ಎಷ್ಟು?
ಆಹಾರ ಇಲಾಖೆ – 2,288 ಕೋಟಿ ರೂಪಾಯಿ ಅನುದಾನ, ವಸತಿ ಇಲಾಖೆ – 3,594 ಕೋಟಿ ರೂಪಾಯಿ ಅನುದಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 4,713 ಕೋಟಿ ಅನುದಾನ ಕೃಷಿ ಮತ್ತು ತೋಟಗಾರಿಕೆ ಇಲಾಖೆ – 8,457 ಕೋಟಿ ರೂ ಅನುದಾನ, ಸಮಾಜ ಕಲ್ಯಾಣ ಇಲಾಖೆ – 9,389 ಕೋಟಿ ರೂ ಅನುದಾನ, ಲೋಕೋಪಯೋಗಿ ಇಲಾಖೆ – 10,447 ಕೋಟಿ ರೂ ಅನುದಾನ, ಸಾರಿಗೆ ಇಲಾಖೆ – 11,222 ಕೋಟಿ ರೂ ಅನುದಾನ, ಜಲ ಸಂಪನ್ಮೂಲ ಇಲಾಖೆ – 20,601 ಕೋಟಿ ರೂ ಅನುದಾನ, ಶಿಕ್ಷಣ ಇಲಾಖೆ – 31,980 ಕೋಟಿ ರೂಪಾಯಿ ಅನುದಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 17,325 ಕೋಟಿ ರೂಪಾಯಿ, ನಗರಾಭಿವೃದ್ಧಿ ಇಲಾಖೆ – 16,076 ಕೋಟಿ ರೂಪಾಯಿ ಅನುದಾನ. ಕಂದಾಯ ಇಲಾಖೆ – 16,388 ಕೋಟಿ ರೂಪಾಯಿ ಅನುದಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 13,982 ಕೋಟಿ ರೂಪಾಯಿ ಅನುದಾನ, ಇಂಧನ ಇಲಾಖೆ – 12,655 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದರು.
ಇದನ್ನೂ ಓದಿ:Live Update: ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ ಆರಂಭ, ಕಾರ್ಮಿಕರಿಗೆ ಸಿಹಿ ಸುದ್ದಿ