Advertisement

ಹುಸಿಬಾಂಬ್‌ ಕರೆ: ರೈಲುಗಳ ತಪಾಸಣೆ

12:35 AM Feb 23, 2019 | |

ಬಾಗಲಕೋಟೆ: ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಅನಾಮಧೇಯ ವ್ಯಕ್ತಿ ಕರೆ ಮಾಡಿ, ರೈಲಿನಲ್ಲಿ ಬಾಂಬ್‌ ಇಟ್ಟಿದ್ದಾಗಿ ಹುಸಿ ಕರೆ ಮಾಡಿದ ಹಿನ್ನೆಲೆಯಲ್ಲಿ ಬಾಗಲಕೋಟೆ ರೈಲ್ವೆ ನಿಲ್ದಾಣ ಮತ್ತು ಇಲ್ಲಿಂದ ಹಾದು ಹೋಗುವ ಎಲ್ಲ ರೈಲುಗಳನ್ನು ತಪಾಸಣೆ ಮಾಡಲಾಯಿತು.

Advertisement

ಬಾಂಬ್‌ ಸ್ಕ್ವಾಡ್‌, ಶ್ವಾನದಳ, ರೈಲ್ವೆ ಪೊಲೀಸರು, ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಒಂದು ಘಂಟೆ ಪರಿಶೀಲಿಸಿದರು. ನಸುಕಿನ 4 ಗಂಟೆಯಿಂದಲೇ ತೆರಳುವ ಎಲ್ಲ ರೈಲುಗಳನ್ನು ಬಾಗಲಕೋಟೆಯಲ್ಲಿ ತಪಾಸಣೆ ನಡೆಸಿ, ಬಿಡಲಾಯಿತು. ಬೆಂಗಳೂರಿನ ರೈಲ್ವೆ ಕಂಟ್ರೋಲ್‌ ರೂಂಗೆ ಕರೆ ಬಂದಿತ್ತು. ಅದು ಹುಸಿ ಕರೆಯಾದರೂ, ನಿರ್ಲಕ್ಷé ಮಾಡುವುದು ಬೇಡವೆಂಬ ಕಾರಣಕ್ಕೆ ರೈಲ್ವೆ ಪೊಲೀಸರೊಂದಿಗೆ ನಗರದ ರೈಲ್ವೆ ನಿಲ್ದಾಣ ಮತ್ತು ರೈಲುಗಳನ್ನು ತಪಾಸಣೆ ಮಾಡಲಾಗಿದೆ ಎಂದು ಎಸ್ಪಿ ಸಿ.ಬಿ. ರಿಷ್ಯಂತ “ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next