Advertisement
ಮೂವತ್ತೆ$çದು ವರ್ಷ ಮೇಲ್ಪಟ್ಟವರ ಮಹಿಳಾ ವಿಭಾಗದಲ್ಲಿ ನೂತನ ದಾಖಲೆ ಯೊಂದಿಗೆ 100 ಮೀ. ಓಟವನ್ನು 14.06 ಸೆಕೆಂಡಿನಲ್ಲಿ ಪೂರೈಸಿ ಚಿನ್ನದ ಪದಕ ಪಡೆದರೆ, ಶಾಟ್‌ಪುಟ್‌ನಲ್ಲಿ ನೂತನ ದಾಖಲೆಯೊಂದಿಗೆ ಚಿನ್ನವನ್ನು ಗೆದ್ದ ಸಾಧನೆ ಮಾಡಿದ್ದಾರೆ. ಅದೇ ರೀತಿ ನ. 19ರಂದು ನಗರದ ಮರೀನ್ ಲೈನ್ಸ್ ಯುನಿವರ್ಸಿಟಿ ನ್ಪೋಟ್ಸ್ ಮೈದಾನದಲ್ಲಿ ನಡೆದ ಮಾಸ್ಟರ್ಸ್ ಸ್ಟೇಟ್ ಅಥ್ಲೆಟಿಕ್ಸ್ ಚಾಂಪಿಯಶಿಪ್ 2017ರಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 100 ಮೀ. ಓಟ, ಡಿಸ್ಕಸ್ ಥ್ರೋ ಮತ್ತು ಶಾಟ್‌ಪುಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.
Related Articles
Advertisement
ಮಂಗಳೂರು ವಿಶ್ವ ವಿದ್ಯಾಲಯದ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಮೂರು ವರ್ಷ ಚಾಂಪಿಯನ್ ಆಗಿ ಮೂಡಿ ಬಂದಿರುವ ಇವರು ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ- ದಹಿಸರ್ ಪ್ರಾದೇಶಿಕ ಸಮಿತಿಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕ್ರೀಡಾಳುಗಳಿಗೆ ತರಬೇತಿ ಕ್ಯಾಥೆದ್ರಲ್ ಮತ್ತು ಜಾನ್ ಕೊನೊನ್ ಸ್ಕೂಲ್´‚ೊàರ್ಟ್ ಮುಂಬಯಿ ಇಲ್ಲಿ 13 ವರ್ಷಗಳ ಕಾಲ ಕ್ರೀಡಾ ಮಾರ್ಗದರ್ಶಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಯುನಿಕ್ಯೂ ನ್ಪೋಟ್ಸ್ ಅಕಾಡಮಿ ಎಂಬ ನ್ಪೋಟ್ಸ್ ಅಕಾಡಮಿಯನ್ನು ಸ್ಥಾಪಿಸಿ ಅದರ ಮುಖಾಂತರ ಯುವ ಕ್ರೀಡಾಳುಗಳಿಗೆ ಕ್ರೀಡಾ ಮಾರ್ಗ ದರ್ಶನದೊಂದಿಗೆ ತರಬೇತಿಯನ್ನು ನೀಡುತ್ತಿದ್ದಾರೆ.