ಮುಂಬಯಿ : ವಿದೇಶೀ ಬಂಡವಾಳ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನಡೆದ ವ್ಯಾಪಕ ಶೇರು ಖರೀದಿಯ ಬೆಂಬಲದೊಂದಿಗೆ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟನ್ನು 167 ಅಂಕಗಳ ಏರಿಕೆಯೊಂದಿಗೆ 28,468.75 ಅಂಕಗಳ ಮಟ್ಟದಲ್ಲಿ ಹೊಸ ಭರವಸೆಯೊಂದಿಗೆ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 43.70 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 8,896.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 425 ಅಂಕಗಳ ಅಮೋಘ ರಾಲಿಯನ್ನು ದಾಖಲಿಸಿ 28,726.26 ಅಂಕಗಳ ಮಟ್ಟಕ್ಕೆ ಏರುವ ಮೂಲಕ ನಿರಂತರ ಎರಡನೇ ದಿನವೂ ಮುನ್ನುಗ್ಗಿತ್ತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 91 ಅಂಕಗಳ ಅಮೋಘ ಜಿಗಿತವನ್ನು ಸಾಧಿಸಿ ದಿನದ ವಹಿವಾಟನ್ನು 8,869.60 ಅಂಕಗಳ ಮಟ್ಟದಲ್ಲಿ ಆರಂಭಿಸಿತ್ತು.
ಇಂದಿನ ವಹಿವಾಟಿನಲ್ಲಿ ಸನ್ ಫಾರ್ಮಾ, ಎಚ್ ಡಿ ಎಫ್ ಸಿ ಬ್ಯಾಂಕ್, ಗೇಲ್, ಐಸಿಐಸಿ ಬ್ಯಾಂಕ್, ಸಿಪ್ಲಾ, ಟಾಟಾ ಮೋಟರ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು.
ಇದೇ ವೇಳೆ ಇನ್‌ಫೋಸಿಸ್, ಏಶ್ಯನ್ ಪೇಂಟ್ಸ್, ಟಿಸಿಎಸ್, ಹೀರೋ ಮೋಟೋ ಕಾರ್ಪ್, ವಿಪ್ರೋ, ಭಾರ್ತಿ ಇನ್‌ಫ್ರಾಟೆಲ್, ಹಿಂಡಾಲ್ಕೋ, ಐಡಿಯಾ ಸೆಲ್ಯುಲರ್ ಶೇರುಗಳು ತೀವ್ರ ಒತ್ತಡಕ್ಕೆ ಗುರಿಯಾದವು.