Advertisement

ಜಾಗತಿಕ ಸ್ಥಿರತೆ: ಮುನ್ನಡೆ ಕಂಡ ಮುಂಬಯಿ ಶೇರು ಪೇಟೆ

12:03 PM Jan 04, 2017 | udayavani editorial |

ಮುಂಬಯಿ : ಜಾಗತಿಕ ಮಾರುಕಟ್ಟೆಗಳಲ್ಲಿನ ಸ್ಥಿರತೆಯನ್ನು ಅನುಸರಿಸಿ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 58 ಅಂಕಗಳ ಮುನ್ನಡೆಯನ್ನು ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಇಳಿಕೆಯ ಹಾದಿಯನ್ನು ಹಿಡಿದು 10.36 ಅಂಕಗಳ ಏರಿಕೆಯೊಂದಿಗೆ 26,653.60 ಅಂಕಗಳ ಮಟ್ಟದಲ್ಲಿ  ವ್ಯವಹಾರ ನಿರತವಾಗಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 4.90 ಅಂಕಗಳ ಏರಿಕೆಯನ್ನು ದಾಖಲಿಸಿ 8,197.15 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದೆ. 

ಇಂದಿನ ವಹಿವಾಟಿನಲ್ಲಿ ಆಟೋ, ಮೆಟಲ್‌, ಇನ್‌ಫ್ರಾ ಶೇರುಗಳು ಉತ್ತಮ ಬೇಡಿಕೆಯನ್ನು ಕಂಡಿರುವುದು ಗಮನಾರ್ಹವಾಗಿದೆ. 

ಇಂದಿನ ಆರಂಭಿಕ ವಹಿವಾಟಿನಲ್ಲಿ ಜಪಾನಿನ ನಿಕ್ಕಿ ಶೇ.2.17, ಶಾಂಘೈ ಸೂಚ್ಯಂಕ ಶೇ.0.20 ಏರಿಕೆಯನ್ನು ಕಂಡಿವೆಯಾದರೆ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್‌ ಶೇ.0.10ರ ಕುಸಿತವನ್ನು ಕಂಡಿದೆ. ಅಮೆರಿಕದ ಡೋವ್‌ ಜೋನ್ಸ್‌ ಸೂಚ್ಯಂಕ ನಿನ್ನೆ ಶೇ.0.60 ಏರಿಕೆಯನ್ನು ದಾಖಲಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next