Advertisement

ಚುನಾವಣಾ ಫ‌ಲಿತಾಂಶದತ್ತ ಚಿತ್ತ : ಮುಂಬಯಿ ಶೇರು 215 ಅಂಕ ಏರಿಕೆ

04:44 PM Mar 06, 2017 | |

ಮುಂಬಯಿ : ಮುಂಚೂಣಿ ಶೇರುಗಳು ಮುಂಬಯಿ ಶೇರು ಮಾರುಕಟ್ಟೆಗೆ ಬಲವಾದ ಆಧಾರ ಸ್ತಂಭಗಳಂತೆ ನಿಂತ ಪರಿಣಾಮವಾಗಿ ಇಂದು ಸೋಮವಾರದ ವಹಿವಾಟನ್ನು ಸೆನ್ಸೆಕ್ಸ್‌ 215.74 ಅಂಕಗಳ ಏರಿಕೆಯೊಂದಿಗೆ 29,048.19 ಅಂಗಳ ಮಟ್ಟದಲ್ಲಿ ಹೊಸ ವಿಶ್ವಾಸ ಮತ್ತು  ಹುಮ್ಮಸ್ಸಿನೊಂದಿಗೆ ಕೊನೆಗೊಳಿಸುವಲ್ಲಿ ಸಫ‌ಲವಾಗಿದೆ. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 65.90 ಅಂಕಗಳ ಏರಿಕೆಯನ್ನು ದಾಖಲಿಸಿದ ದಿನದ ವಹಿವಾಟನ್ನು 8,963.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ  1,503 ಶೇರುಗಳು ಮುನ್ನಡೆ ಸಾಧಿಸಿದರೆ 1,414 ಶೇರುಗಳು ಹಿನ್ನಡೆಗೆ ಗುರಿಯಾದವು. 176 ಶೇರುಗಳು ಇದ್ದಲ್ಲೇ ಉಳಿದವು. 

ಇಂದಿನ ವಹಿವಾಟಿನಲ್ಲಿ  ಐಟಿ ರಂಗದ ಶೇರುಗಳು ಹಿಂದೆ ಬಿದ್ದವು. ಎಚ್‌1ಬಿ ವೀಸಾ ತೊಡಕಿನಿಂದಾಗಿ ಐಟಿ ಶೇರುಗಳು ಒತ್ತಡಕ್ಕೆ ಗುರಿಯಾದವು. 

ಇಂದಿನ ಟಾಪ್‌ ಗೇನರ್‌ಗಳು : ರಿಲಯನ್ಸ್‌, ಟಾಟಾ ಮೋಟರ್‌, ಅದಾನಿ ಪೋರ್ಟ್‌, ಎಸ್‌ ಬ್ಯಾಂಕ್‌, ಬಿಎಚ್‌ಇಎಲ್‌.

Advertisement

ಟಾಪ್‌ ಲೂಸರ್‌ಗಳು  : ಗ್ರಾಸಿಂ, ಅರಬಿಂದೋ ಫಾರ್ಮಾ, ಟಿಸಿಎಸ್‌, ಟೆಕ್‌ ಮಹೀಂದ್ರ, ಐಡಿಯಾ ಸೆಲ್ಯುಲರ್‌ 

ಪಂಚ ರಾಜ್ಯಗಳ ಚುನಾವಣಾ ಫ‌ಲಿತಾಂಶ ಇನ್ನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು  ಉತ್ತರ ಪ್ರದೇಶದಲ್ಲಿ ಬಿಜೆಪಿಯು ಬಹುಮತ ಗಳಿಸಿದಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಹೊಸ ಎತ್ತರವನ್ನು ಏರುವುದು ನಿಶ್ಚಿತ ಎಂಬ ಆಶಾವಾದವನ್ನು ಶೇರು ತಜ್ಞ ಉದಯನ್‌ ಮುಖರ್ಜಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next