ಮುಂಬಯಿ : ಕಳೆದ ನಾಲ್ಕು ದಿನಗಳಿಂದ ನಿರಂತರ ನಷ್ಟದ ಹಾದಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 17.47 ಅಂಕಗಳ ಏರಿಕೆಯೊಂದಿಗೆ 29,336.57 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಆದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 1.65 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,103.50 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,615 ಶೇರುಗಳು ಮುನ್ನಡೆ ಸಾಧಿಸಿದರೆ 1,223 ಶೇರುಗಳು ಹಿನ್ನಡೆಗೆ ಗುರಿಯಾದವು. 181 ಶೇರುಗಳ ಧಾರಣೆ ಬದಲಾಗಲಿಲ್ಲ.
ಅದಾನಿ ಪೋರ್ಟ್, ಬಿಎಚ್‌ಇಎಲ್, ಪವರ್ ಗ್ರಿಡ್ ಮತ್ತು ಭಾರ್ತಿ ಇನ್‌ಫ್ರಾಟೆಲ್ ಟಾಪ್ ಗೇನರ್ ಎನಿಸಿದವು. ಎಸ್‌ಬಿಐ, ಹೀರೋ ಮೋಟೋ ಕಾರ್ಪ್ ಮತ್ತು ಅರಬಿಂದೋ ಫಾರ್ಮಾ ಟಾಪ್ ಲೂಸರ್ ಎನಿಸಿಕೊಂಡವು.
ಈ ಬಾರಿಯ ಮುಂಗಾರು ಮಳೆ ಉತ್ತಮವಾಗಿರುವುದೆಂಬ ಹವಾಮಾನ ಇಲಾಖೆಯ ವರದಿಯಿಂದ ಹೊಸ ಉತ್ತೇಜನ ಪಡೆದ ಮುಂಬಯಿ ಶೇರು ಪೇಟೆ ಆ ನೆಪದಲ್ಲಿ ನಾಲ್ಕು ದಿನಗಳ ಸೋಲಿನ ಸರಣಿಯನ್ನು ಅಲ್ಪ ಮಟ್ಟಿನ ಗಳಿಕೆಯೊಂದಿಗೆ ಕೊನೆಗೊಳಿಸಿತು.