Advertisement

Bomb attack: ಗ್ವಾದಾರ್‌ ಬಂದರಿನಲ್ಲಿ ಬಾಂಬ್‌ ದಾಳಿ: 7 ಮಂದಿ ಹತ್ಯೆಗೈದ ಪಾಕಿಸ್ಥಾನ ಸೇನೆ

04:24 PM Mar 21, 2024 | Team Udayavani |

ಇಸ್ಲಮಾಬಾದ್‌: ಪಾಕಿಸ್ಥಾನದ ಗ್ವಾದಾರ್‌ ಬಂದರಿನ ಸರಕಾರಿ ಕಟ್ಟಡ ಸಂಕೀರ್ಣದ ಮೇಲೆ ಬಲೂಚಿಸ್ಥಾನ ಪ್ರತ್ಯೇಕತಾವಾದಿ ಉಗ್ರರು ಬುಧವಾರ ಸರಣಿ ಬಾಂಬ್‌ ದಾಳಿ ನಡೆಸಿದ್ದಾರೆ.

Advertisement

ಈ ವೇಳೆ ಸೇನೆ ಹಾಗೂ ಆಕ್ರಮ ಣಕೋರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸೇನೆಯು 7 ಜನ ದಾಳಿಕೋರರನ್ನು ಹತ್ಯೆಗೈದಿದೆ ಎಂದು ಗ್ವಾದಾರ್‌ ಪೊಲೀಸ್‌ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿಯ ಹೊಣೆಯನ್ನು ನಿಷೇಧಿತ “ಬಲೂಚಿಸ್ಥಾನ್‌ ಲಿಬರೇಶನ್‌ ಆರ್ಮಿ’ಯ ಮಜೀದ್‌ ಬ್ರಿಗೇಡ್‌ ಹೊತ್ತುಕೊಂಡಿದೆ.

ಇದು ಹಿಂದಿನಿಂದಲೂ ಪಾಕಿಸ್ಥಾನದಲ್ಲಿ ಚೀನದ ಹಸ್ತಕ್ಷೇಪವನ್ನು ವಿರೋಧಿಸುತ್ತಿದ್ದು, ಇತ್ತೀಚೆಗಷ್ಟೇ “ಚೀನ ಪಾಕಿಸ್ಥಾನ್‌ ಎಕನಾಮಿಕ್‌ ಕಾರಿಡಾರ್‌’ ಯೋಜನೆಯನ್ನು ಗುರಿಯಾಗಿಸಿ ಹಲವು ದಾಳಿ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next