Advertisement

ಪ್ರಗತಿಯಲ್ಲಿ ಬೋಳ್ಕಟ್ಟೆ –ಕಂಡ್ಲೂರು ರಸ್ತೆ ಕಾಮಗಾರಿ

11:42 PM May 28, 2020 | Sriram |

ಬಸ್ರೂರು: ಬೋಳ್ಕಟ್ಟೆ -ಕಂಡ್ಲೂರು ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, 45 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.

Advertisement

ಗುಲ್ವಾಡಿ ವೆಂಟೆಡ್‌ ಡ್ಯಾಮ್‌ನಿಂದ ಮಾವಿನ ಕಟ್ಟೆಯವರೆಗೆ ಈಗಾಗಲೇ 4 ಕಿ.ಮೀ.ರಸ್ತೆಗೆ ಕಾಂಕ್ರೀಟ್‌ ಹಾಕಲಾಗಿದೆ. ಮಾವಿನಕಟ್ಟೆಯಿಂದ ತುಸು ಹಿಂದೆ ಬೋಳ್ಕಟ್ಟೆ ಕ್ರಾಸ್‌ನಿಂದ ಸೌಕೂರು ಮತ್ತು ಕಂಡ್ಲೂರಿಗೆ ಹೋಗುವ ರಸ್ತೆಗೆ ಬೈಂದೂರು ಶಾಸಕ ಬಿ.ಎಮ್‌.ಸುಕುಮಾರ ಶೆಟ್ಟಿ ಅವರ ಮುತುವರ್ಜಿಯಲ್ಲಿ 45 ಲಕ್ಷ ರೂ. ಅನುದಾನ ಮಂಜೂರಾಗಿದೆ. ಸುಮಾರು ನಾಲ್ಕು ಕಿ.ಮೀ. ಉದ್ದದ ಈ ರಸ್ತೆಯ ಕಾಮಗಾರಿ ಈಗ ಪ್ರಗತಿಯಲ್ಲಿದೆ.

ಆದರೆ ಬೋಳ್ಕಕಟ್ಟೆಯ ತಿರುವಿನಿಂದ ಕಾಂಕ್ರೀಟ್‌ ಹಾಕಲಾದ ಕಂಡೂÉರು ರಸ್ತೆಯಲ್ಲಿ ತುಸು ಮುಂದೆ ಹೋದರೆ ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಹೋಗುವ ಒಂದು ತಿರುವಿದೆ. ಸುಮಾರು 200 ಮೀ. ದೂರದ ಈ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದು ಬಂದಿದ್ದು, ಭಕ್ತರಿಗೆ ಸಂಚಾರ ಅಸಾಧ್ಯವಾಗಿದೆ. ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕಂಡೂÉರು ಮಾರ್ಗವಾಗಿ ಹೋಗು ವವರಿಗೆ ಈ ನೂತನ ರಸ್ತೆಯಿಂದ ಅನು ಕೂಲವಾಗಲಿದೆ.

ಮಾವಿನಕಟ್ಟೆಯಿಂದ ಸೌಕೂರು ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಈಗಾಗಲೇ ಕಾಂಕ್ರೀಟ್‌ ಹಾಕಲಾಗಿದೆ. ಈ ಮಾರ್ಗದಲ್ಲಿ ಬಸ್‌ ಸಂಚಾರ ಮಾತ್ರ ಇನ್ನೂ ಆರಂಭವಾಗಿಲ್ಲ. ಮಾತ್ರವಲ್ಲ ಈಗ ನಿರ್ಮಾಣವಾಗುತ್ತಿರುವ ಬೋಳ್ಕಕಟ್ಟೆ- ಕಂಡ್ಲೂರು ರಸ್ತೆಯಲ್ಲಿಯೂ ಬಸ್‌ ಸಂಚಾರ ಆರಂಭವಾದರೆ ಸೌಕೂರು ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗಲಿದೆ. ಕುಂದಾಪುರದಿಂದ ಮಾವಿನಕಟ್ಟೆಯ ಮೂಲಕ ಗುಲ್ವಾಡಿಗೆ ಹೋಗುವ ಬಸ್‌ ಒಂದು ಈಗಾಗಲೇ ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಮುಂದೆ ಬಸ್‌ ಮಾವಿನಕಟ್ಟೆಯಿಂದ ಸೌಕೂರು ದೇವಸ್ಥಾನದವರಗೆ ಓಡಿಸಿದರೆ ಭಕ್ತರಿಗೆ ಅನುಕೂಲವಾಗುತ್ತದೆ ಎನ್ನುವುದು
ಜನರ ಅಭಿಪ್ರಾಯ.

ಬಸ್‌ ಸಂಚರಿಸಲಿ
ನಾನು ಬೋಳ್ಕಕಟ್ಟೆಯ ನಿವಾಸಿಯಾಗಿದ್ದು, ಈಗಾಗಲೇ ಮಾವಿನಕಟ್ಟೆಯಿಂದ ಗುಲ್ವಾಡಿಗೆ ಬಸ್‌ ಸಂಚರಿಸುತ್ತಿದ್ದು ಈಗ ಲಾಕ್‌ ಡೌನ್‌ ಕಾರಣ ನಿಂತಿದೆ. ಈ ಬಸ್‌ ಸೌಕೂರಿನವರೆಗೂ ಸಂಚರಿಸಿದರೆ ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗುತ್ತದೆ. ಬೋಳ್ಕಕಟ್ಟೆ- ಕಂಡ್ಲೂರು ರಸ್ತೆ ಕಾಮಗಾರಿ ಪೂರ್ಣವಾದ ಮೇಲೆ ಈ ಮಾರ್ಗದಲ್ಲೂ ಬಸ್‌ ಸಂಚರಿಸಿದರೆ ಸೌಕೂರಿಗೆ ಬರುವ ಭಕ್ತರಿಗೆ ಮತ್ತಷ್ಟು ಅನುಕೂಲವಾಗುತ್ತದೆ.
-ನಾಗರಾಜ ಪೂಜಾರಿ, ಬೋಳ್ಕಕಟ್ಟೆ ನಿವಾಸಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next