ಲಕ್ನೋ: ಇಂಗ್ಲಂಡ್ ನಿಂದ ಮರಳಿದ್ದ ಬಳಿಕ ಕೋವಿಡ್ 19 ವೈರಸ್ ಸೋಂಕಿಗೆ ಒಳಗಾಗಿ ಇದೀಗ ಐಸೊಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರಲ್ಲಿ ಕೊನೆಗೂ ಕೋವಿಡ್ 19 ವರದಿ ನೆಗೆಟಿವ್ ಆಗಿದೆ. ಕನಿಕಾ ಅವರು ಈ ಹಿಂದೆ ಹಲವು ಸಲ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು ಮತ್ತು ಪ್ರತೀಬಾರಿಯೂ ಪಾಸಿಟಿವ್ ವರದಿಯೇ ಬರುತ್ತಿತ್ತು.
Advertisement
ಆದರೆ ಇದೀಗ ಮಾಡಲಾಗಿರುವ ಮಾದರಿ ಪರೀಕ್ಷೆಯಲ್ಲಿ ಕನಿಕಾ ಅವರ ವೈದ್ಯಕೀಯ ವರದಿಯಲ್ಲಿ ಕೋವಿಡ್ 19 ವೈರಸ್ ನೆಗೆಟಿವ್ ಆಗಿದೆ. ಆದರೆ ಕನಿಕಾ ಅವರು ಇನ್ನೂ ಕೆಲವು ದಿನಗಳ ಕಾಲ ಲಕ್ನೋದಲ್ಲಿರುವ ಪಿಜಿಐ ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.