Advertisement

Don:‌ ಶಾರುಖ್‌ ಜಾಗಕ್ಕೆ ಬಿಟೌನ್‌ಗೆ ಹೊಸ ಹೀರೋ ಎಂಟ್ರಿ: ʼಡಾನ್‌ -3ʼಚಿತ್ರದ ಘೋಷಣೆ

04:42 PM Aug 09, 2023 | Team Udayavani |

ಮುಂಬಯಿ: ಬಾಲಿವುಡ್‌ ನಲ್ಲಿ ಮತ್ತೆ ʼಡಾನ್‌ʼ ಅಬ್ಬರಿಸಲಿದ್ದಾನೆ. ಬಾಕ್ಸ್‌ ಆಫೀಸ್ ನಲ್ಲಿ ರೂಲ್‌ ಮಾಡಲು ಹೊಸ ʼಡಾನ್‌ʼ ರೆಡಿಯಾಗಿದ್ದಾರೆ.

Advertisement

2006 ಹಾಗೂ 2011 ರಲ್ಲಿ ʼಡಾನ್‌ʼ ಮೂಲಕ ಶಾರುಖ್‌ ಖಾನ್‌ ಮೋಡಿ ಮಾಡಿದ್ದರು. ಈ ಸಿನಿಮಾ ಬಿಟೌನ್‌ ನಲ್ಲಿ ಇಂದಿಗೂ ಎವರ್‌ ಗ್ರೀನ್‌ ಹಿಟ್‌ ಗಳಲ್ಲೊಂದು. ಇದೀಗ ʼಡಾನ್‌ʼ ಸರಣಿಯ 3ನೇ ಭಾಗ ಅನೌನ್ಸ್‌ ಆಗಿದೆ. ಈ ಬಾರಿʼಡಾನ್‌ʼ ಆಗಿ ಬಾಲಿವುಡ್‌ ನ ಹ್ಯಾಂಡ್ಸಮ್‌ ಹಂಕ್‌ ರಣ್‌ ವೀರ್‌ ಕಾಣಿಸಿಕೊಳ್ಳಲಿದ್ದಾರೆ.

ಬಿಟೌನ್‌ ನಲ್ಲಿ ʼಡಾನ್‌ʼ ಸರಣಿಯ ಪಾತ್ರವನ್ನು ಮಾಡಿ ತನ್ನದೇ ಛಾಪು ಮೂಡಿಸಿದ್ದ ಶಾರುಖ್‌ ಖಾನ್‌ ಅವರ ಬದಲಿಗೆ ಫರ್ಹಾನ್ ಅಖ್ತರ್ ಈ ಬಾರಿ ʼಡಾನ್‌ -3ʼ ನಲ್ಲಿ ರಣವೀರ್‌ ಸಿಂಗ್‌ ಅವರನ್ನು ಆಯ್ದುಕೊಂಡಿದ್ದಾರೆ.

ಅದರಂತೆ ಸಿನಿಮಾದ ಮೊದಲ ಹಂತವಾಗಿ ರಣವೀರ್‌ ಸಿಂಗ್‌ ಅವರ ಗ್ಲಿಂಪ್ಸ್‌ ನ್ನು  ಚಿತ್ರತಂಡ ರಿಲೀಸ್‌ ಮಾಡಿದೆ. ʼ “ಶೇರ್ ಜೋ ಸೋ ರಹಾ ಹೈ ವೋ ಜಾಗೇಗಾ ಕಬ್, ಪೂಚ್ತೇ ಹೈ ಯೇ ಸಬ್. ಉನ್ಸೆ ಕಹ್ ದೋ ಕಿ ಜಾಗ್ ಉಥಾ ಹೂನ್ ಮೈನ್.”( ಮಲಗಿದ ಹುಲಿ ಯಾವಾಗ ಏಳುತ್ತದೆಂದು ಎಲ್ಲರೂ ಕೇಳುತ್ತಾರೆ, ಅವರ ಬಳಿ ಹೇಳಿ ನಾನೀಗ ಎಚ್ಚರಗೊಂಡಿದ್ದೇನೆ) ಎನ್ನುವ ಡೈಲಾಗ್ಸ್‌ ಹೇಳುತ್ತಾ ಅದೇ ʼಡಾನ್‌ʼ ಫ್ಲೇವರ್‌ ಶೂಗಳ ಸದ್ದುಗಳನ್ನು ಮಾಡುತ್ತಾ ಹೊಸ ಡಾನ್‌ ರಣವೀರ್‌ ಮಿಂಚಿದ್ದಾರೆ.

ಇದನ್ನೂ ಓದಿ: Box Officeನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ರಜಿನಿಕಾಂತ್‌ ನಟನೆಯ ಟಾಪ್‌ 7 ಸಿನಿಮಾಗಳಿವು

Advertisement

ಮೌತ್ ​​ಸೆ ಖೇಲ್ನಾ ಜಿಂದಗಿ ಹೈ ಮೇರಿ, ಜೀತ್ನಾ ಹೈ ಮೇರಾ ಕಾಮ್ ಹೈ. ತುಮ್ ತೋ ಹೋ ಜಂತೆ, ಜೋ ಮೇರಾ ನಾಮ್ ಹೈ. 11 ಮುಲ್ಕೋ ಕಿ ಪೋಲೀಸ್ ಧುಂಡ್ತಿ ಹೈ ಮುಝೆ ಪರ್ ಪಕಡ್ ಪಾಯಾ ಹೈ ಮುಜ್ಕೋ ಕೋನ್, ಮೈ ಹೂನ್ ಡಾನ್ ( ಸಾವಿನೊಂದಿಗೆ ಆಡುವುದು ಜೀವನ ನನ್ನದು, ಗೆಲುವುದೇ ನನ್ನ ಕೆಲಸ. ನಿನಗೆ ಗೊತ್ತು ನಾನು ಯಾರೆಂದು, 11 ದೇಶದ ಪೊಲೀಸರು ನನ್ನನು ಹುಡುಕೂತ್ತಾರೆ. ಆದರೆ ಯಾರೂ ನನ್ನನು ಹಿಡಿಯಲು ಆಗಿಲ್ಲ, ನಾನು ಯಾರು.. ನಾನು ಡಾನ್)‌ ಎನ್ನುವ ಡೈಲಾಗ್ಸ್‌ ಗಳನ್ನು ʼಡಾನ್‌ -3ʼ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಡಾನ್‌ ಮುಖ ಅನಾವರಣಗೊಳ್ಳುವ ಗ್ಲಿಂಪ್ಸ್‌ ಅನ್ನು  ರಣವೀರ್‌ ಸಿಂಗ್‌ ಹಂಚಿಕೊಂಡಿದ್ದಾರೆ. ಹೊಸ ಯುಗ ಆರಂಭವೆಂದು ಬರೆದುಕೊಂಡಿದ್ದಾರೆ.

ಈ ಸಿನಿಮಾವನ್ನು ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ನ ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ಅವರು ನಿರ್ಮಾಣ ಮಾಡಲಿದ್ದಾರೆ. 2025 ಕ್ಕೆ ಸಿನಿಮಾ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next