Advertisement

ರಹಸ್ಯವಾಗಿ 2ನೇ ಮದುವೆಯಾದ್ರಾ ಬಿಗ್‌ ಬಾಸ್‌ ಖ್ಯಾತಿಯ ಮುನಾವರ್?‌ ಫೋಟೋ ವೈರಲ್

02:03 PM May 27, 2024 | Team Udayavani |

ಮುಂಬಯಿ: ಬಿಗ್‌ ಬಾಸ್‌ ವಿಜೇತ, ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಮುನಾವರ್‌ ಫಾರೂಕಿ ಮತ್ತೆ ಚರ್ಚೆಗೆ ಬಂದಿದ್ದಾರೆ. ಒಂದಲ್ಲ ಒಂದು ವಿಚಾರದಿಂದ ಇಂಟರ್‌ ನೆಟ್‌ ಟ್ರೆಂಡ್‌ ಇರುವ ಮುನಾವರ್‌ ಈ ಬಾರಿ ಮದುವೆ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.

Advertisement

ʼಲಾಕ್‌ ಅಪ್‌ʼ ಕಾರ್ಯಕ್ರಮದಲ್ಲಿ ವಿಜೇತರಾದ ಬಳಿಕ ಬಿಗ್‌ ಬಾಸ್‌ ಓಟಿಟಿಯಲ್ಲಿ ಕಾಣಿಸಿಕೊಂಡು  ಬಿಗ್‌ ಬಾಸ್‌ -17 ನಲ್ಲಿ ವಿಜೇತರಾದ ಮುನಾವರ್‌ ಫಾರೂಕಿ ಮೊದಲಿನಿಂದಲೂ ಸೋಶಿಯಲ್‌ ಮೀಡಿಯಾದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾ ಪ್ರಭಾವಿ ಆಗುವುದರ ಜೊತೆಗೆ ಮುನಾವರ್‌ ವಿವಾದದಿಂದಲೂ ಸುದ್ದಿಯಾದವರು. ವೈಯಕ್ತಿಕವಾಗಿ ಪ್ರೀತಿಯ ವಿಚಾರದಲ್ಲಿ ಅವರು ಕೆಲ ಆರೋಪವನ್ನು ಎದುರಿಸಿದ್ದಾರೆ. ಅವರ ಮಾಜಿ ಪ್ರೇಯಸಿ ಆಯೇಷಾ ಖಾನ್ ಮುನಾವರ್‌ ತಮಗೆ ಮೋಸ ಮಾಡಿದ್ದಾರೆ ಎಂದು ಬಿಗ್‌ ಬಾಸ್‌ ನಲ್ಲೇ ಆರೋಪಿಸಿದ್ದರು.

ಇದೀಗ ಮುನಾವರ್‌ ಮದುವೆ ಆಗಿದ್ದಾರೆ ಎಂದು ವರದಿಯೊಂದು ಹೊರಬಿದ್ದಿದೆ.

ಮುನಾವರ್ ಎರಡನೇ ಬಾರಿಗೆ ವಿವಾಹವಾಗಿದ್ದಾರೆ. ಅವರ ವಿವಾಹ 10-12 ದಿನಗಳ ಹಿಂದೆ ನಡೆದಿದೆ. ಈ ವಿವಾಹದಲ್ಲಿ ಅವರ ಕೆಲವೇ ಕೆಲ ಕುಟುಂಬದ ಆತ್ಮೀಯರು ಮಾತ್ರ ಭಾಗಿಯಾಗಿದ್ದರು ಎಂದು ಮೂಲವೊಂದು ತಿಳಿಸಿರುವುದಾಗಿ ʼ ಟೈಮ್ಸ್ ನೌʼ ವರದಿ ಮಾಡಿದೆ.

Advertisement

ಮುನಾವರ್ ವಿವಾಹ ವಿ ಮುಂಬೈನ ಐಟಿಸಿ ಮರಾಠಾದಲ್ಲಿ ಹೌಲ್‌ನಲ್ಲಿ ನಡೆದಿದೆ. ಮೇಕಪ್ ಕಲಾವಿದೆಯಾಗಿರುವ ಮೆಹಜ್ಬೀನ್ ಕೋಟ್ವಾಲಾ ಎಂಬಾಕೆ ಜೊತೆ ಮುನಾವರ್‌ ಮದುವೆಯಾಗಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.

ಆದರೆ ಈ ಬಗ್ಗೆ ಮುನಾವರ್‌ ಇದುವರೆಗೆ ಎಲ್ಲೂ ಕೂಡ ಫೋಟೋ ಆಗಲಿ ಅಥವಾ ವಿಷಯವನ್ನು ಬಹಿರಂಗವಾಗಿ ಹಂಚಿಕೊಂಡಿಲ್ಲ. ಆದರೆ ಮದುವೆ ಮಂಟಪದಲ್ಲಿನ ಹೆಸರಿನ ಫೋಟೋ ವೈರಲ್‌ ಆಗಿದೆ.

ಇನ್ನು ಮುನಾವರ್‌ ಈ ಹಿಂದೆ 2017 ರಲ್ಲಿ ಜಾಸ್ಮಿನ್‌ ಎನ್ನುವವರನ್ನು ವಿವಾಹವಾಗಿದ್ದರು. ವಿಚ್ಛೇದನದ ಬಳಿಕ ಮುನಾವರ್‌ ತನ್ನ ಮಗನನ್ನು ನೋಡಿಕೊಳ್ಳುತ್ತಿದ್ದಾರೆ.  ಇದಾದ ಬಳಿಕ ಮುನಾವರ್‌ ನಾಜಿಲಾ ಸಿತೈಶಿ ಅವರೊಂದಿಗೆ ಡೇಟಿಂಗ್‌ ನಲ್ಲಿದ್ದರು.

ಮುನಾವರ್‌ ಮದುವೆ ಆಗಿದ್ದಾರೆ ಎನ್ನಲಾಗಿದ್ದು, ಕಳೆದ ಕೆಲ ದಿನದ ಹಿಂದೆ ಮುನಾವರ್‌ ಅವರ ಆಪ್ತ ಸ್ನೇಹಿತೆ ಹಿನಾ ಖಾನ್‌ ಸೋಶಿಯಲ್‌ ಮೀಡಿಯಾದಲ್ಲಿ ಮದುವೆ ಹಾಡೊಂದನ್ನು ಸ್ಟೋರಿಯನ್ನಾಗಿ ಹಾಕಿದ್ದರು. ಅವರು ಮುನಾವರ್‌ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next