Advertisement

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಸೇರಿಕೊಂಡ ಅಭಿಷೇಕ್‌ ಬಚ್ಚನ್

01:30 PM May 06, 2024 | Team Udayavani |

ಮುಂಬಯಿ: ʼಹೌಸ್‌ ಫುಲ್‌ʼ ಬಾಲಿವುಡ್‌ ಜನಪ್ರಿಯ ಫ್ರಾಂಚೈಸಿ ಸಿನಿಮಾಗಳಲ್ಲಿ ಒಂದು. ʼಹೌಸ್‌ ಫುಲ್‌ -5ʼ ಅನೌನ್ಸ್‌ ಆದ ಬಳಿಕ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.

Advertisement

ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಚಿತ್ರತಂಡ ಬಾಲಿವುಡ್‌ ನ ಖ್ಯಾತ ನಟನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹಾಸ್ಯದ ಪಯಣಕ್ಕೆ ಹೊಸ ನಟನೊಬ್ಬನ ಸೇರ್ಪಡೆಯಾಗಿದೆ.

ಇದುವರೆಗೆ ರಿಲೀಸ್‌ ಆಗಿರುವ ʼಹೌಸ್‌ ಫುಲ್‌ʼ ಸಿನಿಮಾಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದರ ಜೊತೆಗೆ ಬಾಕ್ಸ್‌ ಆಫೀಸ್‌ ನಲ್ಲೂ ಉತ್ತಮ ಕಮಾಯಿ ಮಾಡಿದೆ.

ಈ ಹಿಂದೆಯೇ ʼಹೌಸ್‌ ಫುಲ್‌ -5ʼ ಸಿನಿಮಾ ಅನೌನ್ಸ್‌ ಆಗಿದ್ದು,ಇದೀಗ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ  ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದಾರೆ. ನಟ ಅಭಿಷೇಕ್‌ ಬಚ್ಚನ್‌ ʼಹೌಸ್‌ ಫುಲ್‌ʼ ಫ್ಯಾಮಿಲಿಗೆ ಬಂದಿರುವುದಾಗಿ ಸಾಜಿದ್‌ ಹೇಳಿದ್ದಾರೆ.

ʼಹೌಸ್‌ ಫುಲ್‌ -5ʼ ನಲ್ಲಿ ಅಕ್ಷಯ್ ಕುಮಾರ್, ಅನಿಲ್ ಕಪೂರ್, ನಾನಾ ಪಾಟೇಕರ್, ರಿತೇಶ್ ದೇಶಮುಖ್ ಮತ್ತು ಚಂಕಿ ಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಅಭಿಷೇಕ್‌ ಬಚ್ಚನ್‌ ಸೇರಿಕೊಂಡಿದ್ದಾರೆ.

Advertisement

ಮೊದಲ ʼಹೌಸ್‌ಫುಲ್ʼ ಸಿನಿಮಾ 2010 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಮತ್ತು ಜಿಯಾ ಖಾನ್, ಅರ್ಜುನ್ ರಾಂಪಾಲ್, ಜಾಕ್ವೆಲಿನ್ ಫರ್ನಾಂಡೀಸ್, ಲಾರಾ ದತ್ತಾ ಮತ್ತು ಚಂಕಿ ಪಾಂಡೆ ಅವರೊಂದಿಗೆ ಅಕ್ಷಯ್ ಕುಮಾರ್ ನಟಿಸಿದ್ದರು. 2012 ರಲ್ಲಿ ಫ್ರ್ಯಾಂಚೈಸ್ ನ ಎರಡನೇ ಭಾಗ ರಿಲೀಸ್‌ ಆಗಿತ್ತು. ʼಹೌಸ್‌ಫುಲ್ 3ʼ ಮತ್ತು 4 ಕ್ರಮವಾಗಿ 2016 ಮತ್ತು 2019 ರಲ್ಲಿ ಬಿಡುಗಡೆಯಾಯಿತು.

ʼಹೌಸ್‌ಫುಲ್ – 5ʼ ಸಿನಿಮಾವನ್ನು ತರುಣ್ ಮನ್ಸುಖಾನಿ ನಿರ್ದೇಶಿಸಲಿದ್ದಾರೆ. ಇದೇ ವರ್ಷದ ಆಗಸ್ಟ್‌ ನಲ್ಲಿ ಚಿತ್ರ ಸೆಟ್ಟೇರಲಿದೆ. 2025 ರ ಜೂನ್.‌ 6 ರಂದು ಸಿನಿಮಾ ರಿಲೀಸ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next