Advertisement
ಈ ಕಾರಣದಿದಂದ ಗಾಯಕಿ ಕನಿಕಾ ಕಫೂರ್ ಆರೋಗ್ಯ ಸಮಸ್ಯೆ ಮಾತ್ರವಲ್ಲದೆ, ಇದೀಗ ಕಾನೂನಾತ್ಮಕ ತೊಡಕನ್ನು ಎದುರಿಸುವಂತಾಗಿದೆ. ದೂರಿನಲ್ಲಿರುವಂತೆ ಮಾರ್ಚ್ 14 ರಂದು ಕನ್ನಿಕಾ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸೊಂಕಿಗೆ ಒಳಗಾಗಿದ್ದರು. ಆದರೆ ಸ್ವಯಂ ಪ್ರತ್ಯೇಕತೆಗೆ ಒಳಗೊಳ್ಳದೆ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
Related Articles
Advertisement
ಕನಿಕಾ ಅವರ ತಂದೆ ರಾಜೀವ್ ಕಪೂರ್ ಅವರು ಹೇಳುವಂತೆ ಲಕ್ನೋಗೆ ಬಂದ ನಂತರ ಕನಿಕಾ ಒಟ್ಟು ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದಾಳೆ. ಈ ಮೂರು ವಿವಿಧ ಪಾರ್ಟಿಗಳಲ್ಲಿ ಕನಿಕಾ ಏನಿಲ್ಲವೆಂದರೂ ಸುಮಾರು 400 ಜನರನ್ನು ಭೇಟಿಯಾಗಿರುವ ಸಾಧ್ಯತೆಗಳಿವೆ ಎಂಬುದು ಆಕೆಯ ತಂದೆಯ ಅಂದಾಜು. ಆದರೆ ತಂದೆಯ ಮಾತನ್ನು ಅಲ್ಲಗಳೆದಿರುವ ಕನಿಕಾ, ತಾನು ಒಂದು ಪಾರ್ಟಿಯಲ್ಲ ಮಾತ್ರವೇ ಭಾಗವಹಿಸಿರುವುದಾಗಿ ಹೇಳಿಕೊಂಡಿದ್ದಾಳೆ.
ತನ್ನಲ್ಲಿ ಕೋವಿಡ್ 19 ವೈರಸ್ ಲಕ್ಷಣಗಳು ಪಾಸಿಟಿವ್ ಇರುವುದು ಪತ್ತೆಯಾದ ಬಳಿಕ ಇದೀಗ ಕನಿಕಾಳನ್ನು ಲಕ್ನೋದಲ್ಲಿರುವ ಸಂಜಯ್ ಗಾಂಧಿ ಪೋಸ್ಟ್ ಗ್ರ್ಯಾಜ್ಯುವೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆಯ ಸಂಪರ್ಕಕ್ಕೆ ಬಂದಿರುವವರ ಪೈಕಿ ವಸುಂಧರಾ ರಾಜೆ ಸಿಂಧಿಯಾ, ದುಷ್ಯಂತ್ ಸಿಂಗ್ ಮೊದಲಾದವರು ಇದೀಗ ಸ್ವಯಂ ನಿರ್ಬಂಧ ವಿಧಿಸಿಕೊಂಡು ಪ್ರತ್ಯೇಕವಾಗಿ ಇರಲು ನಿರ್ಧರಿಸಿದ್ದಾರೆ.