Advertisement

Bollywood; ರಾಮ್‌ಸೆ ಬ್ರದರ್ಸ್‌ ಖ್ಯಾತಿಯ ಗಂಗು ರಾಮ್‌ಸೆ ನಿಧನ

01:07 AM Apr 08, 2024 | Team Udayavani |

ಮುಂಬಯಿ: ಬಾಲಿವುಡ್‌ ಹಾರರ್‌ ಸಿನೆಮಾಗಳಾದ “ಪುರಾನಿ ಹವೇಲಿ’, “ತೆಹಖಾನ’ ಖ್ಯಾತಿಯ ಛಾಯಾಗ್ರಾಹಕ, ನಿರ್ಮಾಪಕ ಗಂಗು ರಾಮ್‌ಸೆ(83) ಅನಾರೋಗ್ಯದಿಂದ ರವಿವಾರ ನಿಧನ ಹೊಂದಿದ್ದಾರೆ. 7 ಮಂದಿ ರಾಮ್‌ಸೆ ಸಹೋದರರ ಪೈಕಿ ಒಬ್ಬರಾಗಿದ್ದ ಗಂಗು ರಾಮ್‌ಸೆ ಕಳೆದ ಒಂದು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿ, ಮುಂಬಯಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರಾದ ರೂ ಚಿಕಿತ್ಸೆ ಫ‌ಲಿಸದೆ ನಿಧನ ಹೊಂದಿದರು. ಗಂಗು ರಾಮ್‌ಸೆ ಅವರು ಎಫ್.ಯು.ರಾಮ್‌ಸೆ ಅವರ ಎರಡನೇ ಪುತ್ರ. ಎಫ್.ಯು.ರಾಮ್‌ಸೆ ಸ್ಥಾಪಿಸಿದ ರಾಮ್‌ಸೆ ಬ್ರದರ್ ಬ್ಯಾನರ್‌ ಅಡಿಯಲ್ಲಿ ಗಂಗು ರಾಮ್‌ಸೆ ಅವರು ವೀರಾನಾ, ಪುರಾನ ಮಂದಿರ್‌, ಬಂದ್‌ ದರ್ವಾಜಾ ಸೇರಿ 50ಕ್ಕೂ ಹೆಚ್ಚು ಹಿಂದಿ ಸಿನೆಮಾಗಳನ್ನು ನಿರ್ಮಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next