ಮುಂಬೈ: ಬಾಲಿವುಡ್ ಬೆಡಗಿ ಆಲಿಯಾ ಭಟ್ ಅವರಿಗೆ ಕೋವಿಡ್ ಸೋಂಕು ದೃಡಪಟ್ಟಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂ ನಲ್ಲಿ ಮಾಹಿತಿ ಹಂಚಿಕೊಂಡಿರುವ ಆಲಿಯಾ, ನನಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ವಿಷಯ ತಿಳಿದ ತಕ್ಷಣ ನಾನು ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದು, ಜನರ ಸಂಪರ್ಕದಿಂದ ಹೊರಗಿದ್ದೇನೆ ಹಾಗೂ ವೈದ್ಯರು ತಿಳಿಸಿದಂತೆ ಎಲ್ಲಾ ವಿಧವಾದ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಹುಡುಗಿ ತಂದೆಗೆ 22,000 ರೂ. ಪರಿಹಾರ ನೀಡಿದ ಮ್ಯಾಟ್ರಿಮೋನಿಯಲ್ ಸೈಟ್ !
ನಾನು ವೈದ್ಯರ ಮಾರ್ಗದರ್ಶನದಂತೆ ನನ್ನ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ನೀವು ಕೂಡಾ ಕೋವಿಡ್ ಸೋಂಕಿನ ಕುರಿತಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ತಮ್ಮ ಅಭಿಮಾನಿಗಳಿಗೆ ತಿಳಿಸಿರುವ ನಟಿ, ನನ್ನ ಆರೋಗ್ಯದ ಕುರಿತಾಗಿ ಕಾಳಜಿ ವಹಿಸಿರುವ ಎಲ್ಲರಿಗೂ ನಾನು ಧನ್ಯವಾದವನ್ನು ತಿಳಿಸುವುದಾಗಿ ಹೇಳಿಕೊಂಡಿದ್ದಾರೆ.
ಮುಂಬೈ ನಗರದಲ್ಲಿ ದಿನೇ ದಿನೇ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಗಣನೀಯವಾದ ಏರಿಕೆ ಕಂಡುಬರುತ್ತಿದ್ದು, ನಗರದಲ್ಲಿ ಒಟ್ಟು ಸೋಂಕಿನ ಪ್ರಮಾಣ 4,23,360 ರ ಗಡಿ ದಾಟಿದೆ ಎಂದು ವರದಿ ತಿಳಿಸಿದೆ.