Advertisement

ನಟ ಸೋನು ಸೂದ್ ಸಹೋದರಿ ಮಾಳವಿಕಾ ರಾಜಕೀಯ ಪ್ರವೇಶ

03:25 PM Nov 14, 2021 | Team Udayavani |

ಚಂಡೀಗಢ: ಜನಪ್ರಿಯ ಬಾಲಿವುಡ್ ನಟ ಮತ್ತು ಕೊಡುಗೈ ದಾನಿಯಾಗಿರುವ ಸೋನು ಸೂದ್ ಅವರು ತಮ್ಮ ಸಹೋದರಿ ಮಾಳವಿಕಾ ರಾಜಕೀಯಕ್ಕೆ ಸೇರುತ್ತಿದ್ದಾರೆ ಎಂದು ಭಾನುವಾರ ಘೋಷಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋನು ಸೂದ್, ನನ್ನ ತಂಗಿ ಪಂಜಾಬ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಆದರೆ ನಾನು ಅಂತಹ ಯಾವುದೇ ಯೋಜನೆ ಹೊಂದಿಲ್ಲ ಎಂದರು.

ರಾಜಕೀಯ ಪಕ್ಷಕ್ಕೆ ಸೇರುವ ಬಗ್ಗೆ ಕೇಳಿದಾಗ, ಸೂದ್ ಅವರು “ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.ಪಕ್ಷದ ಬಗ್ಗೆ ಚಿಂತನೆ ಮಾಡಿಲ್ಲ, ಸಮಯ ಬಂದಾಗ, ನಿಮಗೆ ತಿಳಿಸುತ್ತೇವೆ” ಎಂದರು.

ಈಗಾಗಾಲೆ ಮಾಳವಿಕಾ ಅವರು 2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಮೋಗಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿದ್ದವು.

ಮೋಗಾ ಜಿಲ್ಲೆಯವರಾದ ಸೂದ್, ಅವರ ಸಹೋದರಿ ಈ ಹಿಂದೆ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿ ಹೆಸರು ಗಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next