ಮುಂಬೈ : ಚಿತ್ರರಂಗದ ತಾರೆಯರು ಉತ್ತಮ ದೇಹಸಿರಿ ಕಾಪಾಡಿಕೊಳ್ಳುವುದು ಅತ್ಯಗತ್ಯ. ನಟಿಮಣಿಯರು ಜೀರೋ ಸೈಜ್ ಹಿಂದೆ ದುಂಬಾಲು ಬೀಳುತ್ತಾರೆ. ನಟರು 6 ಪ್ಯಾಕ್,8 ಪ್ಯಾಕ್ ಗಾಗಿ ದಿನವಿಡೀ ಶ್ರಮವಹಿಸುತ್ತಾರೆ. ಸದ್ಯ ಬಾಲಿವುಡ್ ನ ಹಿರಿಯ ನಟನೋರ್ವ 65 ಹರಿಯದಲ್ಲೂ ಕಟ್ಟಮಸ್ತಾದ ದೇಹ ಪ್ರದರ್ಶಿಸಿ ಎಲ್ಲರ ಕಣ್ಣರಳಿಸಿದ್ದಾರೆ.
ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಖೇರ್ , ನನಗೆ 65 ವಯಸ್ಸಾದರೂ ‘still I Am Fit’ ಎಂದು ಪ್ರೂವ್ ಮಾಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಶರ್ಟ್ ಲೆಸ್ ಫೋಟೊ ಹಂಚಿಕೊಂಡಿದ್ದಾರೆ. ಇದರ ಜತೆಗೆ “ಎಂದೆಂದಿಗೂ ಸೋಲು ಒಪ್ಪಿಕೊಳ್ಳದ ವ್ಯಕ್ತಿಯ ವಿರುದ್ಧ ಗೆಲುವು ಸಾಧಿಸುವುದು ತುಂಬ ಕಷ್ಟ. ನಾನು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇನೆಯೇ ?ಎಂದು ಅಭಿಮಾನಿಗಳಿಗೆ ಕೇಳಿದ್ದಾರೆ.
ಅನುಪಮ್ ಖೇರ್ ಅವರ ಹುರಿಗೊಳಿಸಿರುವ ದೇಹಸಿರಿ ನೋಡುಗರ ಕಣ್ಣು ಕುಕ್ಕುವಂತಿದೆ.ಈ ವಯಸ್ಸಿನಲ್ಲಿ ಇಂತಹ ಸಾಧನೆ ಹೇಗೆ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ 19 ಸಾವಿರ ಜನರು ಈ ಫೋಟೊಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.