Advertisement

Akshay Kumar: ಸ್ವಾತಂತ್ರ್ಯ ದಿನದಂದೇ ಭಾರತದ ಪೌರತ್ವವನ್ನು ಮರಳಿ ಪಡೆದ ಅಕ್ಷಯ್‌ ಕುಮಾರ್

01:10 PM Aug 15, 2023 | Team Udayavani |

ಮುಂಬಯಿ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಕೆನಡಾ ಪೌರತ್ವವನ್ನು ತ್ಯಜಿಸಿ ಭಾರತೀಯ ಪೌರತ್ವ ಹಾಗೂ ಪಾಸ್‌ ಪೋರ್ಟ್‌ನ್ನು ಮರಳಿ ಪಡೆದುಕೊಂಡಿದ್ದಾರೆ.

Advertisement

ಕೆನಡಾ ಪೌರತ್ವ ಸಲ್ಲಿಸಿದ್ದು ಯಾಕೆ?:

ಬಾಲಿವುಡ್‌ ನಲ್ಲಿ ನಟಿಸಿ, ಭಾರತೀಯರ ಅಪಾರ ಅಭಿಮಾನವನ್ನು ಗಳಿಸಿರುವ ನಟ ಅಕ್ಷಯ್‌ ಕುಮಾರ್‌ ಕೆನಡಾ ದೇಶದ ಪೌರತ್ವವನ್ನು ಹೊಂದಿದ್ದರು. 90 ದಶಕದಲ್ಲಿ ಅವರ ಸಾಲು ಸಾಲ ಸಿನಿಮಾಗಳು ಸೋಲುತ್ತಿದ್ದವು. ಇದರಿಂದ ಮನನೊಂದಿದ್ದ ಅವರು ಬೇರೆ ಏನಾದರೂ ಕೆಲಸ ಮಾಡುವ ನಿಟ್ಟಿನಲ್ಲಿ ಅವರ ಸ್ನೇಹಿತರೊಬ್ಬರ ಸಲಹೆಯಂತೆ ಕೆನಡಾಕ್ಕೆ ತೆರಳಿದ್ದರು. ಆ ಬಳಿಕ ಅಲ್ಲಿನ ಪೌರತ್ವಕೆ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಅವರ ಒಂದೊಂದೇ ಸಿನಿಮಾಗಳು ಹಿಟ್ ಆಗುತ್ತಾ ಹೋಯಿತು.  ಆ ಕಾರಣದಿಂದ ಅವರು ಮತ್ತೆ ಭಾರತಕ್ಕೆ ಬಂದಿದ್ದರು. ಆದರೆ ಈ ವೇಳೆ ಅವರು ಪೌರತ್ವ ಹಾಗೂ ಪಾಸ್ ಪೋರ್ಟ್‌ ಎರಡನ್ನೂ ಬದಲಾಯಿಸಿಕೊಂಡಿರಲಿಲ್ಲ.

ವಿವಾದಕ್ಕೆ ಕಾರಣವಾಗಿದ್ದ ಸಂದರ್ಶನ: 2019 ರಲ್ಲಿ ಪ್ರಧಾನಿ ಮೋದಿ ಅವರನ್ನು ಸಂದರ್ಶನ ಮಾಡಿದ್ದರು. ಈ ವೇಳೆ ಅಕ್ಷಯ್‌ ಅವರ ಪೌರತ್ವದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದಲ್ಲದೇ ಅನೇಕರು ಅಕ್ಷಯ್‌ ಅವರ ಭಾರತೀಯನಲ್ಲ ಎಂದು ಪ್ರಶ್ನೆ ಮಾಡಿದ್ದರು. ಈ ಕಾರಣದಿಂದ ಅಕ್ಷಯ್‌ ಕುಮಾರ್‌ 2019 ರಲ್ಲೇ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋವಿಡ್ ಕಾರಣದಿಂದ ಅವರ ಪೌರತ್ವ ಹಾಗೂ ಪಾಸ್‌ ಪೋರ್ಟ್‌  ಪ್ರಕ್ರಿಯೆ ವಿಳಂಬವಾಗಿತ್ತು.

ದೇಶದ 77ನೇ ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲೇ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವ ಹಾಗೂ ಪಾಸ್ ಪೋರ್ಟ್ ನ್ನು ಮರಳಿ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಅಕ್ಷಯ್ ಅವರೇ ಹಂಚಿಕೊಂಡಿದ್ದಾರೆ. “ನನ್ನ ಹೃದಯ ಹಾಗೂ ಪೌರತ್ವ ಎರಡೂ ಹಿಂದೂಸ್ತಾನಿ, ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು ಜೈಹಿಂದ್” ಎಂದು ಬರೆದುಕೊಂಡು, ಫೋಟೋ ಹಂಚಿಕೊಂಡಿದ್ದಾರೆ.

Advertisement

ಈ ಹಿಂದೆ ಅಕ್ಷಯ್‌ ಕೆನಡಾದ ಪೌರತ್ವ ವಿಚಾರವಾಗಿ ಸಂದರ್ಶನವೊಂದರಲ್ಲಿ“ಭಾರತವೇ ನನಗೆ ಸರ್ವಸ್ವ. ನಾನು ಗಳಿಸಿದ್ದೆಲ್ಲವೂ ಇಲ್ಲಿಂದ. ಮತ್ತು ನಾನು ಹಿಂತಿರುಗಲು ಅವಕಾಶವನ್ನು ಪಡೆದಿರುವುದು ನನ್ನ ಅದೃಷ್ಟ. ಜನರು ಏನನ್ನೂ ತಿಳಿಯದೆ ವಿಷಯಗಳನ್ನು ಹೇಳಿದಾಗ ಬೇಸರವಾಗುತ್ತದೆ” ಎಂದಿದ್ದರು.

ಸದ್ಯ ಅಕ್ಷಯ್‌ ಕುಮಾರ್‌ ಅವರ ʼಓಮೈಗಾಡ್-2”‌ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಗಳಿಕೆ ಕಾಣುವುದರ ಜೊತೆಗೆ ಪ್ರೇಕ್ಷಕರ ಮನಗೆದ್ದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next