Advertisement

ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಬೈಗುಳ ಕಾಮೆಂಟ್ ಮಾಡಿದಾತನ ಮಾನ ಹರಾಜು ಹಾಕಿದ ನಟಿ ದೀಪಿಕಾ!  

07:54 PM Feb 13, 2021 | Team Udayavani |

ಮುಂಬೈ : ಸೆಲಬ್ರಿಟಿಗಳಿಗೆ ಹೊಗಳಿಕೆ ತೆಗಳಿಕೆಗಳು ಕಾಮನ್. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಚಿತ್ರರಂಗದ ತಾರೆಯರು ಟ್ರೋಲ್ ಹಾಗೂ ಟೀಕೆಗೊಳಪಡುತ್ತಿರುತ್ತಾರೆ. ಇವುಗಳನ್ನ ಅವರು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದು ಅಪರೂಪ. ಆದರೆ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತನ್ನನ್ನು ಟೀಕೆ ಮಾಡಿದ ವ್ಯಕ್ತಿಯ ಮಾನ ಮೂರು ಕಾಸಿಗೆ ಹರಾಜು ಹಾಕಿದ್ದಾರೆ.

Advertisement

ಬಿಟೌನ್ ಬೆಡಗಿ ದೀಪಿಕಾ ಪಡುಕೋಣೆಗೆ ಸೋಷಿಯಲ್ ಮೀಡಿಯಾದಲ್ಲಿ ಕಿರಾತಕನೋರ್ವ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾನೆ. ಸಭ್ಯರು ಬಳಸದ ಪದ ಉಪಯೋಗಿಸಿ ಟೀಕಿಸಿದ್ದಾನೆ. ಇದು ನಟಿ ದೀಪಿಕಾ ಅವರ ಗಮನಕ್ಕೂ ಬಂದಿದೆ. ಎಲ್ಲರಂತೆ ಈ ಬೈಗುಳ ನೋಡಿ ಸುಮ್ಮನಾಗದ ಅವರು ಆ ವ್ಯಕ್ತಿ ಕಾಮೆಂಟ್ ಮಾಡಿರುವುದರ ಸ್ಕ್ರೀನ್ ಶಾಟ್ ತೆಗೆದು, ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಡಿಪ್ಪಿ, ನಿನ್ನ ಈ ಗನಂಧಾರಿ ಕಾರ್ಯ ನೋಡಿ ನಿಮ್ಮ ಮನೆಯವರು ಹಾಗೂ ಸ್ನೇಹಿತರು ಮೆಚ್ಚುಗೆ ಪಡುತ್ತಾರೆ ಎಂದು ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ.

ಇನ್ನು ಸದ್ಯ ದೀಪಿಕಾ ಪಡುಕೋಣೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು. ಶಾರುಖ್ ಖಾನ್ ಹಾಗೂ ಪ್ರಭಾಸ್ ಜತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರವೊಂದರ ಶೂಟಿಂಗ್ ನಿಮಿತ್ತ ದುಬೈಗೆ ತೆರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next