Advertisement

ಕುದಿಯುವ ನೀರು ಮೈಮೇಲೆ ಬಿದ್ದು 4 ವರ್ಷದ ಮಗು ಸಾವು

11:55 AM Mar 07, 2017 | |

ಯಲಹಂಕ: ಸ್ನಾನಕ್ಕೆಂದು ಬಿಸಿ ಮಾಡಿಟ್ಟಿದ್ದ ನೀರು ಮೈಮೇಲೆ ಬಿದ್ದು ಬಾಲಕ ಮೃತಪಟ್ಟ ಘಟನೆ ಯಲಹಂಕ ಉಪನಗರ ಠಾಣೆ ವ್ಯಾಪ್ತಿಯ ಅಟ್ಟೂರು ಲೇಜೌಟ್‌ನಲ್ಲಿ ನಡೆದಿದೆ. ಲೇಔಟ್‌ ನಿವಾಸಿ ಆಶಾ ಎಂಬುವರ ಪುತ್ರ ಮಾರ್ಟಿನೆ ಶೇಷಾದ್ರಿ (4) ಮೃತ ಬಾಲಕ.

Advertisement

ಗಾರ್ಮೆಂಟ್ಸ್‌ ನೌಕರರಾ­ಗಿರುವ ಆಶಾ ಅವರ ಪತಿ ಭರತ್‌, ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಆಶಾ ಅವರು ತಾಯಿ ಲಕ್ಷಮ್ಮ ಮತ್ತು ತಂದೆ ಕರಿನಾಗಪ್ಪಜತೆ ವಾಸವಿದ್ದಾರೆ. ಇವರು ನಿತ್ಯ ಸ್ನಾನಕ್ಕೆಂದು ಮನೆಯ ಹಾಲ್‌ನಲ್ಲೇ ಬಕೆಟ್‌ ಇರಿಸಿ, ಎಲೆಕ್ಟ್ರಿಕ್‌ ಕಾಯಿಲ್‌ ಬಳಸಿ ನೀರು ಬಿಸಿ ಮಾಡಿಕೊಳ್ಳುತ್ತಿದ್ದರು.

ಸೋಮವಾರ ಕೂಡ ಎಂದಿನಂತೆ ನೀರು ಬಿಸಿ ಮಾಡಲು ಬಕೆಟ್‌ಗೆ ಕಾಯಿಲ್‌ ಹಾಕಿದ್ದು, ನೀರು ಅಗತ್ಯಕ್ಕಿಂತ ಹೆಚ್ಚೇ ಬಿಸಿಯಾಗಿದೆ. ಲಕ್ಷ್ಮಮ್ಮ ಅವರು ಈ ನೀರಿಗೆ ಬೆರೆಸಲು ತಣ್ಣೀರು ತರಲು ಹೋದಾಗ, ಅಲ್ಲೇ ಆಟವಾಡುತ್ತಿದ್ದ ಮಗು, ಬಕೆಟ್‌ ಬಳಿ ಬಂದು ಕಾಯಿಲ್‌ ಎಳೆದಾಗ ಕುದಿಯುತ್ತಿದ್ದ ನೀರು ಮಗುವಿನ ಮೈಮೇಲೆ ಬಿದ್ದಿವೆ.

ಪರಿಣಾಮ, ಮಗುವಿನ ಮೈತುಂಬಾ ಬೊಬ್ಬೆ ಬಂದಿದ್ದು, ತಕ್ಷಣ ಸಮೀಪದ ಖಾಸಗಿ ಆಸ್ವತ್ರೆಗೆ ದಾಖಲಿಸಿದ್ದಾರೆ. ನಂತರ ವಿಕ್ಟೋರಿಯಾಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಿಸದೆ ಮಗು ಮೃತಪಟ್ಟಿದೆ. 

Advertisement

Udayavani is now on Telegram. Click here to join our channel and stay updated with the latest news.

Next