ಚೆನ್ನೈ: ದೇಶದ ನವರತ್ನ ಕಂಪೆನಿಗಳಲ್ಲಿ ಒಂದಾಗಿರುವ ಪ್ರಮುಖ ಸಾರ್ವಜನಿಕ ಉದ್ದಿಮೆಯ ಕಲ್ಲಿದ್ದಲು ಗಣಿಗಾರಿಕೆ ಕಂಪೆನಿಯಾಗಿರುವ ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ನ ಪ್ಲ್ಯಾಂಟ್ ನಲ್ಲಿ ಬಾಯ್ಲರ್ ಸ್ಪೋಟಗೊಂಡಿರುವ ಘಟನೆ ವರದಿಯಾಗಿದೆ.
ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ ತಮಿಳುನಾಡಿನ ಕುಡ್ಡಲೋರ್ ಜಿಲ್ಲೆಯಲ್ಲಿದೆ. ಈ ದುರ್ಘಟನೆಯಲ್ಲಿ ಕನಿಷ್ಟ ಏಳು ಜನರು ಗಾಯಗೊಂಡಿರುವುದಾಗಿ ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ಎನ್.ಎಲ್.ಸಿ. ಕಂಪೆನಿಯ ಅಧಿಕಾರಿಗಳು ಇದೀಗ ಘಟನಾ ಸ್ಥಳಕ್ಕೆ ದೌಡಾಯಿಸಿರುವುದಾಗಿ ತಿಳಿದುಬಂದಿದೆ. ಜೊತೆಯಲ್ಲಿ ತಮಿಳುನಾಡು ಪೊಲೀಸ್ ಮತ್ತು ಅಗ್ನಿ ಶಾಮಕ ದಳವೂ ಸಹ ಘಟನಾ ಸ್ಥಳಕ್ಕೆ ದೌಡಾಯಿಸಿವೆ.
ಎನ್.ಎಲ್.ಸಿ. ಇಂಡಿಯಾ ಭಾರತ ಸರಕಾರದ ನವರತ್ನ ಕಂಪೆನಿಗಳಲ್ಲಿ ಒಂದಾಗಿದ್ದು ಪಳೆಯುಳಿಕೆ ಇಂಧನ ಕ್ಷೇತ್ರ ಹಾಗೂ ಉಷ್ಣವಿದ್ಯುತ್ ಸ್ಥಾವರ ಕ್ಷೇತ್ರಗಳಲ್ಲಿ ತನ್ನ ಉತ್ಪಾದನಾ ಕಾರ್ಯವನ್ನು ನಡೆಸುತ್ತಿರುವ ಕಂಪೆನಿಯಾಗಿದೆ.