Advertisement

ದಟ್ಟ ಹೊಗೆ, 19 ವಿಮಾನ ಹಾರಾಟ ವಿಳಂಬ; ಏನಿದು ಬೋಗಿ ಉತ್ಸವ?

12:08 PM Jan 13, 2017 | Team Udayavani |

ಚೆನ್ನೈ : ‘ಬೋಗಿ ಉತ್ಸವ’ದ ಪ್ರಯುಕ್ತ ಹಳೆ ವಸ್ತುಗಳನ್ನು ರಾಶಿ ಹಾಕಿ ಸುಟ್ಟ ಕಾರಣ ಇಲ್ಲಿನ ವಿಮಾನ ನಿಲ್ದಾಣ ಪ್ರದೇಶದ ಆಗಸದಲ್ಲಿ ದಟ್ಟನೆಯ ಹೊಗೆ ತುಂಬಿಕೊಂಡಿದ್ದು ಇದರ ಪರಿಣಾಮವಾಗಿ ಇಂದು ಶುಕ್ರವಾರ ಬೆಳಗ್ಗೆ  ಸುಮಾರು 19 ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನಗಳ ಹಾರಾಟ ತೀವ್ರವಾಗಿ ಬಾಧಿತವಾಯಿತು. 

Advertisement

ಮಸ್ಕತ್‌, ಮಾರಿಶಸ್‌ ಮತ್ತು ಕೊಲಂಬೋ ಮೊದಲಾದೆಡೆಗಳಿಂದ ಇಲ್ಲಿಗೆ ಬಂದು ಇಳಿಯಲಿದ್ದ  14 ವಿಮಾನಗಳು ಹಾಗೂ ಇಲ್ಲಿಂದ ಹೊರಡಲಿದ್ದ ಹಲವಾರು ದೇಶೀಯ ವಿಮಾನಗಳ ಹಾರಾಟವು ಸುಮಾರು 2 ತಾಸುಗಳ ಕಾಲ ವಿಳಂಬಗೊಂಡಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈಯಿಂದ ಬಂದಿದ್ದ ಅಂತಾರಾಷ್ಟ್ರೀಯ ವಿಮಾನವನ್ನು ಕೊಚ್ಚಿಗೆ ಕಳುಹಿಸಲಾಯಿತಾದರೆ,  ಬೆಂಗಳೂರು, ಕೊಯಮುತ್ತೂರು ಮೊದಲಾದೆಡೆಗೆ ಹೋಗಲಿದ್ದ ವಿಮಾನಗಳ ಹಾರಾಟ ವಿಳಂಬವಾಯಿತು.  ವಿಮಾನ ನಿಲ್ದಾಣದ ಅಗಸದಲ್ಲಿ ದಟ್ಟನೆಯ ಕಪ್ಪು ಹೊಗೆ ತುಂಬಿಕೊಂಡಿದ್ದರಿಂದ ಗೋಚರತೆ ಅತ್ಯಂತ ಕಡಿಮೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳು ನಾಡಿನಲ್ಲಿ  ಹಳೇ ವಸ್ತುಗಳನ್ನು ರಾಶಿ ಹಾಕಿ ಸುಡುವ ಬೋಗಿ ಉತ್ಸವವು ಪೊಂಗಲ್‌ ಮುನ್ನಾ ದಿನ ನಡೆಯುತ್ತದೆ. ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗುವುದೆಂಬ ನಂಬಿಕೆಯಲ್ಲಿ ಹಳೇ ವಸ್ತುಗಳನ್ನು ಸುಡುವುದು ಬೋಗಿ ಉತ್ಸವದ ವಿಶೇಷ. 

Advertisement

Udayavani is now on Telegram. Click here to join our channel and stay updated with the latest news.

Next