Advertisement

20 ವರ್ಷಗಳಲ್ಲಿ ಭಾರತ 2,100 ಹೊಸ ವಿಮಾನ ಖರೀದಿಸಲಿದೆ; ಬೋಯಿಂಗ್

02:53 PM Jul 31, 2017 | Sharanya Alva |

ನವದೆಹಲಿ: ಮುಂದಿನ 20 ವರ್ಷಗಳಲ್ಲಿ ಭಾರತೀಯ ವಾಯುಯಾನ ಸಂಸ್ಥೆ ಸುಮಾರು 2,100 ನೂತನ (ಅಂದಾಜು 290 ಬಿಲಿಯನ್ ಡಾಲರ್) ವಿಮಾನಗಳನ್ನು ಖರೀದಿಸುವ ನಿರೀಕ್ಷೆ ಇದೆ ಎಂದು ಬೋಯಿಂಗ್ ಸಂಸ್ಥೆ ಸೋಮವಾರ ತಿಳಿಸಿದೆ. 

Advertisement

ಕಳೆದ ಕೆಲವು ವರ್ಷಗಳಲ್ಲಿ ದೇಶಿಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.20ರಷ್ಟು ಹೆಚ್ಚಳವಾಗುವ ಮೂಲಕ ಭಾರತ ಜಾಗತಿಕವಾಗಿ ವಾಯುಯಾನ ಮಾರುಕಟ್ಟೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ.

ಪ್ರಯಾಣ ದರ, ಕಡಿಮೆ ಇಂಧನ ದರಗಳು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲು ಕಾರಣವಾಗುವ ಮೂಲಕ ಭಾರತೀಯ ವಾಯುಯಾನ ಮಾರುಕಟ್ಟೆ ಪ್ರಗತಿಯಾಗುವಲ್ಲಿ ಸಹಕಾರಿಯಾಗಿದೆ ಎಂದು ಬೋಯಿಂಗ್ ಕಮರ್ಷಿಯಲ್ ವಿಮಾನ ಸಂಸ್ಥೆಯ ಉಪಾಧ್ಯಕ್ಷ ದಿನೇಶ್ ಕೇಸ್ಕರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next