Advertisement

ಬೋಯಿಂಗ್‌ ಸೇವೆ ರದ್ದು?

12:30 AM Mar 12, 2019 | |

ಹೊಸದಿಲ್ಲಿ: ಇಥಿಯೋಪಿಯಾ ವಿಮಾನ ದುರಂತದಲ್ಲಿ 157 ಮಂದಿ ಮೃತಪಟ್ಟ ಬೆನ್ನಲ್ಲೇ, ಸುರಕ್ಷತೆಯ ದೃಷ್ಟಿಯಿಂದ ಬೋಯಿಂಗ್‌ 737 ಮ್ಯಾಕ್ಸ್‌ 8 ವಿಮಾನಗಳ ಬಳಕೆಯನ್ನೇ ನಿಲ್ಲಿಸಲು ಹಲವು ದೇಶಗಳು ಮುಂದಾಗಿವೆ. ಈಗಾಗಲೇ ಇಥಿಯೋಪಿಯಾ, ಚೀನ, ಇಂಡೋನೇಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳು ಈ ವಿಮಾನಗಳ ಕಾರ್ಯ ನಿರ್ವಹಣೆಯನ್ನು ಸ್ಥಗಿತಗೊಳಿಸಿದ್ದು, ಭಾರತದಲ್ಲೂ ಈ ಕುರಿತು ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬೋಯಿಂಗ್‌ 737 ವಿಮಾನಗಳನ್ನು ಬಳಸುವುದೋ, ಬೇಡವೋ ಎಂಬ ಬಗ್ಗೆ ಸೋಮವಾರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನಯಾನ ಮಹಾ ನಿರ್ದೇಶನಾಲಯವು ಚರ್ಚಿಸಿದೆ. ಸದ್ಯದಲ್ಲೇ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ದೇಶೀಯ ವಿಮಾನಯಾನ ಸಂಸ್ಥೆಗಳಿಗೂ ಬೋಯಿಂಗ್‌ 737ಗೆ ಸಂಬಂಧಿಸಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಥಿಯೋಪಿಯಾ, ಇಂಡೋನೇಷ್ಯಾದಲ್ಲಿ ಈ ವಿಮಾನಗಳ ಸೇವೆ ರದ್ದಾದ ಬೆನ್ನಲ್ಲೇ ಚೀನದಲ್ಲಿ ಸುಮಾರು 100ರಷ್ಟು ಬೋಯಿಂಗ್‌ ವಿಮಾನಗಳ ಬಳಕೆಗೆ ನಿರ್ಬಂಧ ಹೇರಿ ಸೋಮವಾರ ಆದೇಶ ಹೊರಡಿಸಲಾಗಿದೆ. 

ಕುಟುಂಬ ಪತ್ತೆಗೆ ನೆರವು ಕೋರಿದ ಸುಷ್ಮಾ: ಈ ನಡುವೆ, ವಿಮಾನ ದುರಂತದಲ್ಲಿ ಅಸುನೀಗಿದ ನಾಲ್ವರು ಭಾರತೀಯರ ಕುಟುಂಬಗಳಿಗೆ ಅಗತ್ಯ ನೆರವು ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಹೇಳಿದ್ದಾರೆ. ಅಲ್ಲದೆ, ಮೃತ ಭಾರತೀಯರ ಪೈಕಿ ವಿಶ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಖಾ ಗರ್ಗ್‌ ಕೂಡ ಸೇರಿದ್ದು, ಅವರ ಕುಟುಂಬವನ್ನು ಸಂಪರ್ಕಿಸಲು ನೆರವಾಗಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಷ್ಮಾ ಕೇಳಿಕೊಂಡಿದ್ದಾರೆ. ಶಿಖಾರ ಪತಿಗೆ ಎಷ್ಟೇ ಕರೆ ಮಾಡಿದರೂ, ಸಂಪರ್ಕ ಸಿಗದ ಹಿನ್ನೆಲೆ ಸುಷ್ಮಾ ಈ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next