Advertisement

ಬೆಂಗರೆ: ಮೂರು ಸರಕು ನೌಕೆಗಳು ಬೆಂಕಿಗಾಹುತಿ

12:32 AM Oct 29, 2022 | Team Udayavani |

ಮಂಗಳೂರು: ಸರಕು ಸಾಗಾಟದ 3 ನೌಕೆಗಳು (ಮಂಜಿ) ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಸಂಜೆ ಕಸಬಾ ಬೆಂಗರೆಯಲ್ಲಿ ನಡೆದಿದೆ.

Advertisement

ಲಕ್ಷದ್ವೀಪಕ್ಕೆ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ಈ ನೌಕೆಗಳನ್ನು ದುರಸ್ತಿ ಕಾರಣಕ್ಕೆ ಎರಡು ವರ್ಷಗಳಿಂದ ನೀರಿನಿಂದ ಮೇಲಕ್ಕೆತ್ತಿ ಇಡಲಾಗಿತ್ತು. ಶನಿವಾರ ಸಂಜೆ 5ರ ಸುಮಾರಿಗೆ ಬೆಂಕಿ ತಗಲಿದೆ. ಭಾರೀ ಪ್ರಮಾಣದ ಬೆಂಕಿಯನ್ನು ನಂದಿಸಲು ಮಂಗಳೂರು ಅಗ್ನಿ ಶಾಮಕ ದಳ ಹಾಗೂ ಎಂಆರ್‌ಪಿಎಲ್‌ನ ಅಗ್ನಿಶಾಮಕ ದಳದವರು ತಡರಾತ್ರಿವರೆಗೂ ಶ್ರಮಿಸಿದರು.

ಎಂಎಸ್‌ವಿ ನಜತ್‌, ಎಂಎಸ್‌ವಿ ಅಲ್‌ ಜಝೀರಾ, ಎಂಎಸ್‌ವಿ ಅಲಿ ಮದತ್‌ ಎಂಬ ಈ ಸರಕು ನೌಕೆಗಳು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದ್ದಾಗಿದ್ದು ಇದರಲ್ಲಿ ಒಂದು ನೌಕೆಯನ್ನು ದುರಸ್ತಿಪಡಿಸಿ ಮತ್ತೆ ಸರಕು ಸಾಗಾಟಕ್ಕೆ ಸಿದ್ಧಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.

ಯಾರೋ ಉರಿಸಿದ ರಾಕೆಟ್‌ ಪಟಾಕಿ ಬಿದ್ದು ಬೆಂಕಿ ತಗಲಿರುವುದಾಗಿ ಸ್ಥಳೀಯರು ಹೇಳುತ್ತಾರೆ, ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ.

ಮಂಜಿ ನೌಕೆಗಳು ದೊಡ್ಡ ಗಾತ್ರ ದವುಗಳಾಗಿದ್ದು ಸಾಮಾನ್ಯವಾಗಿ ಲಕ್ಷದ್ವೀಪ ಹಾಗೂ ಮಂಗಳೂರು ಮಧ್ಯೆ ಸರಕು ಸಾಗಾಟಕ್ಕೆ ಬಳಕೆ ಯಾಗು ತ್ತವೆ. ಇವು ಮಂಗಳೂರು ಹಳೆ ಬಂದರಿಗೆ ಬಂದು ಅಲ್ಲಿಂದ ಸರಕು ಕೊಂಡೊಯ್ಯುತ್ತವೆ. ಸದ್ಯ ದುರಸ್ತಿಗಾಗಿ ಬೆಂಗರೆಯ ತೀರಕ್ಕೆ ತರಲಾಗಿದೆ.

Advertisement

ಬೆಂಕಿ ನಿಯಂತ್ರಣಕ್ಕೆ ಹರಸಾಹಸ
ಬೆಂಕಿ ಅವಘಡದಿಂದ ಒಂದು ಮನೆ ಹಾಗೂ ಮೀನು ದಾಸ್ತಾನು ಇಡುವ ಶೆಡ್‌ಗೂ ಹಾನಿಯಾಗಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಸ್ಥಳೀಯರು ಕೂಡ ಕೈ ಜೋಡಿಸಿದ್ದರು. ಪಕ್ಕದ ನದಿಗೆ ಪಂಪ್‌ ಅಳವಡಿಸಿ ನೀರು ಹಾಯಿಸಲಾಯಿತು. ಆದರೆ ಗಾಳಿಯ ತೀವ್ರತೆ ಇದ್ದುದರಿಂದ ಬೆಂಕಿ ನಿಯಂತ್ರಿಸಲು ಹರಸಾಹಸ ಪಡು ವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next