Advertisement

ಉಪ್ಪುಂದದಲ್ಲಿ ಮೀನುಗಾರಿಕಾ ದೋಣಿ ಮುಳುಗಡೆ ; ಓರ್ವ ಸಾವು, ಓರ್ವ ನಾಪತ್ತೆ

10:18 PM Jul 31, 2023 | Team Udayavani |

ಉಪ್ಪುಂದ(ಬೈಂದೂರು): ಇಲ್ಲಿನ ಕರ್ಕಿಕಳಿ ಎಂಬಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿ ಓರ್ವ ಮೃತ್ತಪಟ್ಟಿದ್ದು, ಇನ್ನೊರ್ವ ಸಮುದ್ರ ಪಾಲಾದ ಘಟನೆ ಜು.31ರಂದು ಮಧ್ಯಾಹ್ನ ಸಂಭವಿಸಿದೆ.

Advertisement

ಮೀನುಗಾರಿಕೆ ತೆರಳಿದ ದೋಣಿಯು ವಾಪಸ್ ಬರುವಾಗ ಅಲೆಗಳಿಗೆ ಸಿಕ್ಕಿ ಮಗುಚಿದೆ. ದೋಣಿಯಲ್ಲಿದ್ದ 8 ಜನರ ಪೈಕಿ ಒಬ್ಬರು ಕೊಚ್ಚಿ ಹೋಗಿದ್ದು, ಅಲೆಗಳಿಗೆ ಸಿಕ್ಕಿದ್ದ ಇನ್ನೊಬ್ಬರನ್ನು ದಡಕ್ಕೆ ತರಲಾಗಿದ್ದು ಚಿಂತಾಜನಕ ಸ್ಥಿಯಲ್ಲಿದ್ದ ವೇಳೆ ಆಸ್ಪತ್ರೆಗೆ ದಾಖಲು ಮಾಡಲು ಕೊಂಡೊಯ್ಯುತ್ತಿದ್ದ ವೇಳೆ ಮೃತ ಪಟ್ಟಿರುವುದಾಗಿ ವರದಿಯಾಗಿದೆ.

ಮೃತ ದುರ್ದೈವಿಗಳು ದೊಡ್ಡಕೊಂಬಿನಮನೆ ನಾಗೇಶ (27) ಮೃತಪಟ್ಟ ದುದೈವಿ ಮತ್ತು ಗಂರ್ಗೆರಿ ಮನೆ ಸತೀಶ (29) ನೀರು ಪಾಲಾದವ ಎಂದು ಗುರುತಿಸಲಾಗಿದೆ. ಸಚಿನ್ ಎನ್ನುವರ ಮಾಲಕತ್ವದ ಮರ್ಲು ಚಿಕ್ಕು ಹೆಸರಿನ ದೋಣಿ ಸಂಪೂರ್ಣವಾಗಿ ಮುಳುಗಡೆಯಾಗಿದೆ.ಕಡಲ ಪಾಲಾದ ಮೀನುಗಾರನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಉಳಿದ ನಾಲ್ವರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next