Advertisement
ಶ್ರೀಕಾಂತ ಪುತ್ರನ್ ಅವರಿಗೆ ಸೇರಿದ ಹನುಮ ತೀರ್ಥ ಬೋಟ್ ಮಂಗಳವಾರ ಬೆಳಗ್ಗೆ ಇಲ್ಲಿನ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ರಾತ್ರಿ ವಾಪಸಾಗುತ್ತಿದ್ದಾಗ ಸೈಂಟ್ ಮೇರಿಸ್ ದ್ವೀಪದ ಸಮೀಪ ಸ್ಟೇರಿಂಗ್ ತುಂಡಾಗಿ ನಿಯಂತ್ರಣ ತಪ್ಪಿ ಬಂಡೆಗೆ ಬಡಿದು ಮುಳುಗಡೆಗೊಂಡಿದೆ.ಬೋಟ್‌ನಲ್ಲಿದ್ದ ಮೀನುಗಾರ ರನ್ನು ಇತರ ಬೋಟುಗಳ ಮೀನು ಗಾರರು ತತ್‌ಕ್ಷಣವೇ ರಕ್ಷಿಸಿ ದಡ ಸೇರಿಸಿದ್ದಾರೆ. ನಷ್ಟದ ವಿವರ ಇನ್ನಷ್ಟೇ ತಿಳಿಯಬೇಕಿದೆ.