ನವದೆಹಲಿ: ಜರ್ಮನಿಯ ಐಶಾರಾಮಿ ವಾಹನ ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯೂ ಗ್ರೂಪ್ ಮತ್ತು ಜಾಗತಿಕ ಡಿಜಿಟಲ್ ಸೇವೆಗಳ ಸಂಸ್ಥೆಯಾದ ಟಾಟಾ ಟೆಕ್ನಾಲಜೀಸ್ ಭಾರತದಲ್ಲಿ ಆಟೋಮೋಟಿವ್ ಸಾಫ್ಟ್ ವೇರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಜಂಟಿ ಉದ್ಯಮ ಸ್ಥಾಪಿಸಲು ಉಭಯ ಸಂಸ್ಥೆಗಳ ನಡುವೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಮುಂದಿನ ಬಾರಿ ಸ್ಪರ್ಧೆ ಮಾಡಲ್ಲ… ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ: ಮೈಸೂರಿನಲ್ಲಿ ಸಿಎಂ
ಪುಣೆ, ಬೆಂಗಳೂರು ಮತ್ತು ಚೆನ್ನೈನಲ್ಲಿ ಆಟೋಮೋಟಿವ್ ಸಾಫ್ಟ್ ವೇರ್ ಮತ್ತು ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಜಂಟಿ ಉದ್ಯಮ ಸ್ಥಾಪನೆಗಾಗಿ ಎರಡು ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಬೆಂಗಳೂರು ಮತ್ತು ಪುಣೆಯಲ್ಲಿ ಪ್ರಮುಖ ಅಭಿವೃದ್ಧಿ ಮತ್ತು ಕಾರ್ಯಾಚರಣೆ ಚಟುವಟಿಕೆ ಸ್ಥಾಪಿಸಲು ಉದ್ದೇಶಿಸಿದ್ದು, ಚೆನ್ನೈನಲ್ಲಿ ಐಟಿ ಸೊಲ್ಯೂಷನ್ಸ್ ವಹಿವಾಟಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟನೆ ವಿವರಿಸಿದೆ.
ಜಂಟಿ ಉದ್ಯಮವು ಬಿಎಂಡಬ್ಲ್ಯೂ ಗ್ರೂಪ್ ನ ಸಾಫ್ಟ್ ವೇರ್ ಮತ್ತು ಐಟಿ ಹಬ್ ಗಳ ಜಾಗತಿಕ ನೆಟ್ ವರ್ಕ್ ಭಾಗವಾಗಲಿದೆ. ಬಿಎಂಡಬ್ಲ್ಯೂ ಗ್ರೂಪ್ ಜತೆಗಿನ ಸಹಭಾಗಿತ್ವದ ಮೂಲಕ ಆಟೋಮೋಟಿವ್ ಸಾಫ್ಟ್ ವೇರ್ ಉನ್ನತ ಮಟ್ಟದ ಸೊಲ್ಯೂಷನ್ಸ್ ಮತ್ತು ಜಾಗತಿಕವಾಗಿ ಗ್ರಾಹಕರಿಗೆ ಡಿಜಿಟಲ್ ಎಂಜಿನಿಯರಿಂಗ್ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಟಾಟಾ ಟೆಕ್ನಾಲಜೀಸ್ ನ ಸಿಇಒ ಮತ್ತು ಎಂಡಿ ವಾರ್ರೆನ್ ಹ್ಯಾರೀಸ್ ತಿಳಿಸಿದ್ದಾರೆ.