Advertisement
ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2 ಜೋಡಿ (4) ಹಾಗೂ ಯಶವಂತಪುರದಿಂದ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದು ಜೋಡಿ (2) ಉಪನಗರ ರೈಲು ಸೇವೆ ಪರಿಚಯಿಸಲು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಹೊಸ ಹಾಲ್ಟ್ ಸ್ಟೇಷನ್‌ನಿಂದ ವಿಮಾನ ನಿಲ್ದಾಣ ಟರ್ಮಿನಲ್ ನಡುವೆ ಶೆಟಲ್ ಸೇವೆಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಹಾಲ್ಟ್ ಸ್ಟೇಷನ್‌ನಿಂದ ಟರ್ಮಿ ನಲ್‌ಗೆ ಸುಮಾರು 5 ಕಿ.ಮೀ. ದೂರ ಆಗುತ್ತದೆ. ರೈಲಿನಲ್ಲಿ ಬಂದಿಳಿಯುವ ಪ್ರಯಾಣಿಕರಿಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನಿಯಮಿತ (ಬಿಐಎಎಲ್) ಶೆಟಲ್ ಸೇವೆ ಆರಂಭಿ ಸಬೇಕಿದೆ. ಈ ಉದ್ದೇಶಕ್ಕೆ ಬಿಎಂಟಿಸಿ ವೋಲ್ವೊ ಬಸ್ ಪರಿಚಯಿಸಲು ಚಿಂತನೆ ನಡೆದಿದೆ. ಆದರೆ, ಇನ್ನೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ.
Related Articles
Advertisement
“ವೋಲ್ವೊ ಬಸ್‌ವೊಂದರ ದಿನದ ಬಾಡಿಗೆ 15ರಿಂದ 20 ಸಾವಿರ ರೂ. ಆಗುತ್ತದೆ. ಕನಿಷ್ಠ 5 ಬಸ್ ಗುತ್ತಿಗೆ ಪಡೆದರೂ, 1 ಲಕ್ಷ ರೂ.ಆಗುತ್ತದೆ. ಪೂರ್ಣಪ್ರಮಾಣದಲ್ಲಿ ಸೇವೆ ಒದಗಿಸಿದರೆ, ಈ ಆದಾಯ ದುಪ್ಪಟ್ಟು ಆಗಲಿದೆ. ಬಿಎಂಟಿಸಿಗೆ ಇಲ್ಲಿ ಆದಾಯಕ್ಕಿಂತ ಹೆಚ್ಚಾಗಿ ಸೇವೆ ಮುಖ್ಯವಾಗಿದ್ದು, ತಮ್ಮ ಬಸ್‌ಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಆದರೆ, ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ’ ಎಂದು ಬಿಎಂಟಿಸಿ ಹಿರಿಯಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು. “ಖಾಸಗಿಯವರಿಗೆಹೋಲಿಸಿದರೆ, ಬಿಎಂಟಿಸಿ ವೋಲ್ವೊ ಬಸ್‌ಗಳ ಬಾಡಿಗೆ ತುಸು ದುಬಾರಿಅನಿಸಬಹುದು. ಆದರೆ, ಸೇವೆಗಳು ಉತ್ತಮ. ಜತೆಗೆ ಸರ್ಕಾರಿ ಸಂಸ್ಥೆಆಗಿರುವುದರಿಂದ ಜವಾಬ್ದಾರಿ ಹೆಚ್ಚಿರುತ್ತದೆ. ಒಂದು ವೇಳೆ ಬಿಐಎಎಲ್ ಒತ್ತಾಯಕ್ಕೆ ನಾವು ಬಾಡಿಗೆ ಕಡಿಮೆ ಮಾಡಲು ಆಗುವುದಿಲ್ಲ. ಹಾಗೊಂದು ವೇಳೆ ಕಡಿಮೆ ಮಾಡಿದರೆ, ಉಳಿದ ಕಡೆಗೆ ನೂರಾರು ಬಸ್‌ಗಳನ್ನು ಬಾಡಿಗೆಗೆ ನೀಡುತ್ತಿದ್ದೇವೆ. ಅವರಿಂದಲೂ ಒತ್ತಾಯ ಕೇಳಿ ಬರುತ್ತದೆ. ಆಗ, ನಿರ್ವಹಿಸುವುದು ಕಷ್ಟ ಆಗಲಿದೆ’ ಎಂದೂ ಅಧಿಕಾರಿಗಳು ತಿಳಿಸುತ್ತಾರೆ.
ಎಲೆಕ್ಟ್ರಿಕ್ ವೋಲ್ವೋ ಬಸ್ ಪೂರಕ :
ಬಿಐಎಎಲ್ ಮೊದಲಿನಿಂದಲೂ ಮಳೆನೀರು ಕೊಯ್ಲು, ಸೋಲಾರ್, ನೀರಿನ ಮರುಬಳಕೆ ಸೇರಿದಂತೆ “ಪರಿಸರ ಸ್ನೇಹಿ’ ಚಟುವಟಿಕೆಗಳಿಗೆ ಒತ್ತು ನೀಡುತ್ತಿದೆ. ಒಂದೆರಡು ತಿಂಗಳಲ್ಲಿಬಿಎಂಟಿಸಿ ಕೂಡ ಎಲೆಕ್ಟ್ರಿಕ್ ವೋಲ್ವೊ ಬಸ್‌ಗಳನ್ನು ರಸ್ತೆಗಿಳಿಸಲಿದೆ. ಆಗ, ಶೆಟಲ್ ಸೇವೆಗಳ ರೂಪದಲ್ಲಿ ಈ ವಿದ್ಯುತ್‌ಚಾಲಿತ ಬಸ್‌ಗಳನ್ನು ಕಲ್ಪಿಸಬಹುದು. ಇದು ಬಿಐಎಎಲ್ ಚಟುವಟಿಕೆಗೆ ಪೂರಕವಾಗಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಅಂತಿಮವಾಗಿಲ್ಲ: ಬಿಐಎಎಲ್ : ಬಿಐಎಎಲ್ ವಕ್ತಾರರು ಹೇಳುವ ಪ್ರಕಾರ “ರೈಲು ಸೇವೆಗಳು ಆರಂಭಗೊಂಡ ನಂತರ ಶೆಟಲ್ ಸೇವೆಗಳ ಪ್ರಶ್ನೆ ಬರುತ್ತದೆ. ಸದ್ಯಕ್ಕೆ ಶೆಟಲ್ ಸೇವೆಗಳಿಗೆ ಸಿದ್ಧತೆಯಂತೂ ನಡೆದಿದೆ. ಆದರೆ, ಅವುಗಳು ಬಿಎಂಟಿಸಿಯ ಬಸ್ ಅಥವಾಖಾಸಗಿ ಬಸ್‌ಗಳನ್ನು ಪರಿಚಯಿಸಬೇಕೋ ಎಂಬುದು ಇನ್ನೂ ಅಂತಿಮವಾಗಿಲ್ಲ’ ಎಂದಷ್ಟೇ ಮಾಹಿತಿ ನೀಡಿದರು.
–ವಿಜಯಕುಮಾರ್ ಚಂದರಗಿ