Advertisement

ಬಿಎಂಟಿಸಿ ಡಿಪೋ ಮ್ಯಾನೇಜರ್ ಸಸ್ಪೆಂಡ್: ಸಿಹಿ ಹಂಚಿ ಎಎಪಿ ಸಂಭ್ರಮಾಚರಣೆ

05:23 PM Sep 04, 2022 | Team Udayavani |

ಬೆಂಗಳೂರು: ನಗರದ ಆರ್ ಆರ್ ನಗರದ ಚನ್ನಸಂದ್ರ ಬಿಎಂಟಿಸಿ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನ್ ಹಾಗೂ ಸಹಾಯಕ ಟ್ರಾಫಿಕ್ ಕಂಟ್ರೋಲರ್ ದಾಬೋಜಿ ರವರ ಅಮಾನತು ಆದೇಶವನ್ನು ಸಿಹಿ ಹಂಚುವ ಮೂಲಕ ಆಮ್ ಆದ್ಮಿ ಪಕ್ಷ ಚನ್ನಸಂದ್ರ ಡಿಪೋದಲ್ಲಿ ಆಚರಿಸಿದೆ.

Advertisement

ನಗರಾಧ್ಯಕ್ಷ ಮೋಹನ್ ದಾಸರಿ ಸುದ್ದಿಗಾರರೊಂದಿಗೆ ಮಾತನಾಡಿ “ಇತ್ತೀಚಿನ ವರ್ಷಗಳಲ್ಲಿ ಡಿಪೋ ಮ್ಯಾನೇಜರ್ ಹಾಗೂ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅಧಿಕಾರಿಗಳ ಕಿರುಕುಳ- ಮಾನಸಿಕ ಹಿಂಸೆಯನ್ನು ತಡೆಯಲಾರದೆ ಸಾರಿಗೆ ನೌಕರರು ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಇದೇ ರೀತಿ ಹೊಳೆ ಬಸಪ್ಪ ಎಂಬ ಚಾಲಕನು ಕಳೆದ 4 ದಿವಸಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ನಮ್ಮ ಸತತ ಹೋರಾಟದ ಫಲವಾಗಿ ಇದೀಗ ಸಂಸ್ಥೆಯು ಅಮಾನತು ಕ್ರಮವನ್ನು ತೆಗೆದುಕೊಂಡಿರುವುದು ಸಾರಿಗೆ ನೌಕರರು ಗಳಲ್ಲಿ ಆಶಾಭಾವನೆಯನ್ನು ಮೂಡಿಸಿದೆ. ಯಾವುದೇ ಕಾರಣಕ್ಕೂ ನೌಕರರು ಆತ್ಮಹತ್ಯೆಯ ದಾರಿಯನ್ನು ಹಿಡಿಯಬಾರದು. ಆಮ್ ಆದ್ಮಿ ಪಕ್ಷವು ಸದಾ ನೌಕರರ ಪರವಾಗಿ ಇರುತ್ತದೆ ” ಎಂದರು.

ಇದೇ ಸಂದರ್ಭದಲ್ಲಿ ಸಾರಿಗೆ ಸಚಿವ ಶ್ರೀರಾಮಲು ಹಾಗೂ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ರಾಜೀನಾಮೆಯನ್ನು ನೀಡಿ ಸಾರಿಗೆ ಸಂಸ್ಥೆಯನ್ನು ಉಳಿಸಬೇಕೆಂದರು.

ಪಕ್ಷದ ಮುಖಂಡರುಗಳಾದ ಜಗದೀಶ್ ವಿ. ಸದಂ , ಸುರೇಶ್ ರಾಥೋಡ್, ಮುಖೇಶ್ ತೀರನ್ ನೌಕರರ ನಾಯಕರುಗಳಾದ ಜಗದೀಶ್ ,ರಾಮು ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next